Home ರಾಷ್ಟ್ರೀಯ ಬಿಹಾರ | ದಲಿತರ 21 ಮನೆಗಳಿಗೆ ದುಷ್ಕರ್ಮಿಗಳಿಂದ ಬೆಂಕಿ: ಮೋದಿಯ ಶ್ರೀರಕ್ಷೆ ಎಂದ ರಾಹುಲ್ ಗಾಂಧಿ

ಬಿಹಾರ | ದಲಿತರ 21 ಮನೆಗಳಿಗೆ ದುಷ್ಕರ್ಮಿಗಳಿಂದ ಬೆಂಕಿ: ಮೋದಿಯ ಶ್ರೀರಕ್ಷೆ ಎಂದ ರಾಹುಲ್ ಗಾಂಧಿ

ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯಲ್ಲಿ ದಲಿತ ಕುಟುಂಬಗಳು ವಾಸವಾಗಿರುವ ಕೇರಿಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 20ಕ್ಕೂ ಹೆಚ್ಚು ಮನೆಗಳು ಅಗ್ನಿಗೆ ಆಹುತಿಯಾಗಿವೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಪ್ರಮುಖ ಶಂಕಿತ ಆರೋಪಿ ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಬಿಹಾರದಲ್ಲಿ ಜಂಗಲ್ ರಾಜ್ ಅಸ್ತಿತ್ವಕ್ಕೆ ಇದು ಮತ್ತೊಂದು ಪುರಾವೆಯಾಗಿದೆ ಎಂದು ಆರ್ಜೆಡಿ ಮತ್ತು ಕಾಂಗ್ರೆಸ್ ವಾಗ್ದಾಳಿ ನಡೆಸಿವೆ.


ಬಿಹಾರದ ಜೆಡಿಯು- ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದಲಿತರು ಹಾಗೂ ವಂಚಿತರ ಕಡೆಗಿನ ಸರ್ಕಾರದ ಸಂಪೂರ್ಣ ಉದಾಸೀನತೆಯನ್ನು ಈ ಘಟನೆ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.


“ನವಾಡದಲ್ಲಿನ ಮಹಾದಲಿತರ ಇಡೀ ಕಾಲೋನಿಯನ್ನು ಸುಟ್ಟು ಹಾಕುವುದು ಬಿಹಾರದಲ್ಲಿನ ಬಹುಜನರ ವಿರುದ್ಧದ ಅನ್ಯಾಯದ ಭಯಾನಕ ಚಿತ್ರಣವನ್ನು ಎತ್ತಿ ತೋರಿಸುತ್ತದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


“ಇಂತಹ ಅರಾಜಕತಾವಾದಿ ಶಕ್ತಿಗಳು ಬಿಜೆಪಿ ಹಾಗೂ ಅದರ ಎನ್ಡಿಎ ಮಿತ್ರಪಕ್ಷಗಳ ನಾಯಕತ್ವದ ಅಡಿಯಲ್ಲಿ ಆಶ್ರಯ ಕಂಡುಕೊಳ್ಳುತ್ತವೆ. ಅವರು ಬಹುಜನರನ್ನು ಬೆದರಿಸುತ್ತಾರೆ ಮತ್ತು ಶೋಷಿಸುತ್ತಾರೆ. ಹೀಗಾಗಿ ತಮ್ಮ ಸಾಮಾಜಿಕ ಮತ್ತು ಸಾಂವಿಧಾನಿಕ ಹಕ್ಕುಗಳಿಗೆ ಬೇಡಿಕೆ ಇರಿಸುವುದು ಸಹ ಅವರಿಂದ ಸಾಧ್ಯವಾಗುವುದಿಲ್ಲ. ಈ ದೊಡ್ಡ ಸಂಚಿಗೆ ಪ್ರಧಾನಿಯ ಮೌನವು ಅನುಮೋದನೆಯ ಮುದ್ರೆಯಾಗಿದೆ” ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version