Home ಟಾಪ್ ಸುದ್ದಿಗಳು ಶಬರಿಮಲೆಯ ‘ಹಾಲಾಲ್ ಬೆಲ್ಲ’ ಕಂಪನಿ ಮಾಲೀಕ ಶಿವಸೇನೆ ನಾಯಕ!

ಶಬರಿಮಲೆಯ ‘ಹಾಲಾಲ್ ಬೆಲ್ಲ’ ಕಂಪನಿ ಮಾಲೀಕ ಶಿವಸೇನೆ ನಾಯಕ!

‘ಹಲಾಲ್ ಬೆಲ್ಲದ’ ಬಗ್ಗೆ ತಕರಾರು ಎತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಮುಖಭಂಗ

ತಿರುವನಂತಪುರ: ಶಬರಿಮಲೆಗೆ ಸಂಬಂಧಿಸಿದ ‘ಹಲಾಲ್ ಬೆಲ್ಲ’ ವಿವಾದ ಮಹತ್ವದ ತಿರುವು ಪಡೆದಿದೆ.

ಶಬರಿಮಲೆಯಲ್ಲಿ ಬಳಸಲಾಗುವ ಬೆಲ್ಲದ ಪ್ಯಾಕೆಟ್‌ಗಳನ್ನು ತಯಾರು ಮಾಡುವುದು ಮುಸ್ಲಿಮರ ಒಡೆತನದಲ್ಲಿರುವ ಕಂಪನಿಯಲ್ಲ ಎಂದು ಕಂಪನಿಯ ವೆಬ್‌ ಸೈಟ್‌ನಲ್ಲಿರುವ ದಾಖಲೆಗಳು ಉಲ್ಲೇಖಿಸಿರುವುದರಿಂದ ಬೆಲ್ಲದ ಹೆಸರಿನಲ್ಲಿ ವಿವಾದ ಎಬ್ಬಿಸಿದ್ದ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.

ಶಬರಿಮಲೆಯ ದೇವಳದಲ್ಲಿ ಉಪಯೋಗಿಸುವ ಬೆಲ್ಲದಲ್ಲಿ ಕೂಡ ಹಲಾಲ್ ಎಂದು ಬರೆಯಲಾಗಿದ್ದು, ಈ ಸಂಸ್ಕೃತಿಯನ್ನು ಇಲ್ಲಿಗೆ ತಂದವರು ಯಾರು? ಎಂದು ಇತ್ತೀಚೆಗೆ ಕೇರಳ ಬಿಜೆಪಿ ರಾಜ್ಯಧ್ಯಕ್ಷ ಕೆ.ಸುರೇಂದ್ರನ್ ಪ್ರಶ್ನಿಸಿದ್ದರು.


ಬೆಲ್ಲದ ಪ್ಯಾಕೇಟ್ ಗಳನ್ನು ಮಹಾರಾಷ್ಟ್ರದ ಪುಣೆ ಮೂಲದ ವರ್ಧನ್ ಆಗ್ರೋ ಪ್ರೊಸೆಸಿಂಗ್ ಲಿಮಿಟೆಡ್ ಕಂಪನಿ ತಯಾರಿಸುತ್ತಿದೆ. ಇದಲ್ಲದೆ ಕಂಪನಿಯ ಮಾಲಿಕ ಧೈರ್ಯಶೀಲ್ ಧ್ಯಾನದೇವ್ ಕದಮ್ ಮಹಾರಾಷ್ಟ್ರದ ಶಿವಸೇನೆ ನಾಯಕರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾರಟ್ ಉತ್ತರ ಕ್ಷೇತ್ರದಲ್ಲಿ ಧ್ಯಾನದೇವ್ ಶಿವಸೇನೆ ಅಭ್ಯರ್ಥಿಯಾಗಿದ್ದರು. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಿವಸೇನೆಗೆ ಸಂಬಂಧಿಸಿದ ಪೋಸ್ಟ್‌ಗಳಿವೆ.
ಕಂಪನಿ ವೆಬ್ ಸೈಟ್ ನಲ್ಲಿರುವ ದಾಖಲೆಗಳು ಬಹಿರಂಗವಾಗುತ್ತಿದ್ದಂತೆಯೇ ಬಿಜೆಪಿಗೆ ತೀವ್ರ ಮುಜುಗರವುಂಟಾಗಿದೆ.

ಕೇರಳದ ಶಬರಿಮಲೆಯಲ್ಲಿಯೂ ಹಲಾಲ್ ಬೆಲ್ಲವನ್ನು ಬಳಸುವ ಗತಿಗೇಡು ಬಂದಿದೆ. ಹಲಾಲ್ ಸಂಸ್ಕೃತಿಯನ್ನು ಇಲ್ಲಿಗೆ ತಂದವರು ಯಾರು? ಎಂದು ಕೆ. ಸರೇಂದ್ರನ್ ಪ್ರಶ್ನಿಸಿದ್ದರು.

Join Whatsapp
Exit mobile version