Home ಟಾಪ್ ಸುದ್ದಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ಗೆ ಮತ್ತೆ ಬಿಗ್ ರಿಲೀಫ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ಗೆ ಮತ್ತೆ ಬಿಗ್ ರಿಲೀಫ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಮತ್ತೆ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮತ್ತೆ ವಿಸ್ತರಣೆಯಾಗಿದೆ.


ಪ್ರಕರಣದ ಫೈಲ್ ಸಿಜೆ ಅಂಗಳಕ್ಕೆ ಹೋಗಿದೆ. ಈ ಹಿಂದೆ ನ್ಯಾ.ನಟರಾಜನ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠಕ್ಕೆ ವರ್ಗಾವಣೆ ಆಗಿದೆ.

ಹೀಗಾಗಿ ಯಾವ ಪೀಠದಲ್ಲಿ ವಿಚಾರಣೆ ಮುಂದುವರಿಸಬೇಕು ಎಂದು ಸಿಜೆ ನಿರ್ಧಾರ ಮಾಡಲಿದ್ದಾರೆ. ಪ್ರಕರಣ ಫೈಲ್ ರಿಜಿಸ್ಟ್ರಾರ್ ಗೆ ನ್ಯಾ.ನಾಗಪ್ರಸನ್ನ ಅವರು ಕಳುಹಿಸಿದ್ದಾರೆ. ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರೆಸಿ ಕೋರ್ಟ್ ಆದೇಶ ಹೊರಡಿಸಿದೆ.

Join Whatsapp
Exit mobile version