Home ಟಾಪ್ ಸುದ್ದಿಗಳು ಬೀದರ್ | ಇರ್ಟಿಗಾ ಕಾರು, ಕಂಟೆನರ್ ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಸಾವು

ಬೀದರ್ | ಇರ್ಟಿಗಾ ಕಾರು, ಕಂಟೆನರ್ ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಸಾವು

ಬೀದರ್: ಸುಝುಕಿ ಇರ್ಟಿಗಾ ಕಾರು ಮತ್ತು ಕಂಟೈನರ್ ನಡುವೆ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಅಸುನೀಗಿರುವ ಘಟನೆ ಬೀದರ್ ನಲ್ಲಿ ವರದಿಯಾಗಿದೆ.

ಮೃತಪಟ್ಟವರನ್ನು ಹೈದರಾಬಾದ್ ನ ಬೇಗಂ ಪೇಟೆ ನಿವಾಸಿಗಳೆಂದು ಹೇಳಲಾಗಿದೆ.

ಹೈದರಾಬಾದ್’ನಿಂದ ಕಲ್ಬುರ್ಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುವ ವೇಳೆ ರಾಷ್ಟ್ರೀಯ ಹೆದ್ದಾರಿ ಭಂಗೂರ ಎಂಬಲ್ಲಿ ಈ ಅಪಘಾತ ಉಂಟಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಐವರು ಗಾಯಾಳುಗಳಿಗೆ ಬೀದರ್’ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಮನ್ನಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version