Home ಟಾಪ್ ಸುದ್ದಿಗಳು ಭಾರತ್ ಬಂದ್ | ರಾಜ್ಯದೆಲ್ಲೆಡೆ ಮಣ್ಣಿನ ಮಕ್ಕಳ ಪ್ರತಿಭಟನೆ

ಭಾರತ್ ಬಂದ್ | ರಾಜ್ಯದೆಲ್ಲೆಡೆ ಮಣ್ಣಿನ ಮಕ್ಕಳ ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ (ಇಂದು) ಭಾರತ್ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರೈತ ಸಂಘಟನೆಗಳು ಸೇರಿದಂತೆ ಕನ್ನಡ ಪರ , ಇನ್ನಿತರ ಸಂಘಟನೆಗಳು ಬೆಳ್ಳಂಬೆಳಗ್ಗೆ ಬೀದಿಗಿಳಿದಿವೆ.

ರಾಜ್ಯ ರಾಜಧಾನಿ ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಆನೇಕಲ್, ವಿಜಯಪುರ, ಚಿಕ್ಕಮಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ರೈತರು ಸೇರಿದಂತೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡಸುತ್ತಿದ್ದು ಕೇಂದ್ರ ಒಕ್ಕೂಟ ಸರಕಾರದ ವಿರುದ್ಧ ಸಿಡಿಮಿಡಿ ಗೊಂಡಿದ್ದಾರೆ.

ಆದರೆ ಬಸ್ ಸೇವೆ, ಹೋಟೆಲ್ ಸೇವೆ, ಅಗತ್ಯ ಮತ್ತು ಇನ್ನಿತರ ಸೇವೆಗಳು ಎಂದಿನಂತೆ ಲಭ್ಯವಾಗಿದ್ದು, ಜನ ಜೀವನ ವ್ಯಾಪಾರ ವಹಿವಾಟು ಕಾರ್ಯಾಚರಿಸುತ್ತಿವೆ. ರಾಜ್ಯದ ಜಿಲ್ಲೆ, ಭಾಗಗಳಲ್ಲಿ ರೈತ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದು ಕೆಲ ಭಾಗಗಳಲ್ಲಿ ಪ್ರತಿಭಟಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆಗಳೂ ನಡೆದಿವೆ.

Join Whatsapp
Exit mobile version