ಬೆಂಗಳೂರು: ಈಗ ಎಲ್ಲಿ ನೋಡಿದರೂ ಕಾರ್ಟೂನ್ ಇಮೇಜ್ ಗಳೇ ಕಾಣುತ್ತಿದೆ. ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಘಿಬ್ಲಿ (Ghibli Ai) ದೊಡ್ಡ ಗಲಿಬಿಲಿಯನ್ನೇ ಮಾಡಿಬಿಟ್ಟಿದೆ. ವಾಟ್ಸ್ಯಾಪ್, ಇನ್ ಸ್ಟಾಗ್ರಾಮ್, ಫೇಸ್ ಬುಕ್ ಎಲ್ಲಿ ನೋಡಿದರೂ ಘಿಬ್ಲಿ ಆರ್ಟ್ ಗಳೇ ಕಣ್ಣಿಗೆ ಬೀಳುತ್ತದೆ.
ಇದೀಗ ಘಿಬ್ಲಿ ಆರ್ಟ್ ವೈರಲ್ ಆಗುತ್ತಿದ್ದಂತೆ ಖಾಕಿ ಅಲರ್ಟ್ ಆಗಿದೆ. ಎಐ ಬಳಸಿಕೊಂಡು ಘಿಬ್ಲಿ ಆರ್ಟ್ ಮಾಡೋರಿಗೆ ಪೊಲೀಸರು ಇದೀಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಘಿಬ್ಲಿ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಇತ್ತೀಚೆಗಷ್ಟೇ ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಈ ಬೆನ್ನಲ್ಲೇ ಪೊಲೀಸರೂ ಕೂಡಾ ಸಾರ್ವಜನಿಕರಿಗೆ ಎಚ್ಚರಿಗೆ ನೀಡಿದ್ದಾರೆ. AI ನಲ್ಲಿ ರಚಿಸಿದ ಘಿಬ್ಲಿ ಟ್ರೆಂಡ್ ನೋಡಲು ಚಂದ ಆದ್ರೇ ಎಲ್ಲಾ AI ಆ್ಯಪ್ ಗಳು ಗೌಪ್ಯತೆಯನ್ನು ರಕ್ಷಿಸಲ್ಲ. ವೈಯಕ್ತಿಕ ಫೋಟೋಗಳನ್ನು ಅಪ್ಲೋಡ್ ಮಾಡುವ ಮೊದಲು ಯೋಚಿಸಿ ಎಂದು ಪೊಲೀಸರು ಬಳಕೆದಾರರಿಗೆ ಸಂದೇಶ ನೀಡಿದ್ದಾರೆ. ವಿಶ್ವಾಸಾರ್ಹ AI ಅಪ್ಲಿಕೇಶನ್ ಮಾತ್ರ ಬಳಸಿ ಅಂತಾ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಘಿಬ್ಲಿ ಆರ್ಟ್ ಗೆ ಖಾಕಿ ವಾರ್ನಿಂಗ್
ವಾಸ್ತವವಾಗಿ, ಇದರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವವರು, ಇದು AI ತರಬೇತಿಗಾಗಿ ಸಾವಿರಾರು ವೈಯಕ್ತಿಕ ಫೋಟೋಗಳನ್ನು ಸಂಗ್ರಹಿಸಲು ಮಾಡುತ್ತಿರುವ ಒಂದು ತಂತ್ರವಾಗಿರಬಹುದು ಎಂದು ಹೇಳುತ್ತಾರೆ.
ಈ ಘಿಬ್ಲಿ- ಸ್ಟುಡಿಯೋ ಸ್ಟೈಲ್ ಡಿಸೈನ್ ವೈರಲ್ ಆಗಿದೆ, ಹೀಗಾಗಿ ಎಲ್ಲರೂ ಟ್ರೆಂಡ್ ಸೆಟ್ ಮಾಡಲು ತಮ್ಮ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಿ ಜನರೇಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಳಕೆದಾರರು ತಿಳಿಯದೆಯೇ OpenAI ಗೆ ಫೇಸ್ ಡೇಟಾವನ್ನು ನೀಡುತ್ತಿದ್ದಾರೆ ಎಂದು ವಿಮರ್ಶಕರು ಹೇಳಿದ್ದಾರೆ. ಇದು ಅವರ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
GDPR ನಿಯಮಗಳ ಪ್ರಕಾರ, OpenAI ಇಂಟರ್ನೆಟ್ ನಿಂದ ಫೋಟೋಗಳನ್ನು ಸ್ಕ್ರ್ಯಾಪ್ ಮಾಡಲು “ಕಾನೂನುಬದ್ಧ ಆಸಕ್ತಿ”ಯನ್ನು ತಿಳಿಸಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿ ಭದ್ರತಾ ಕ್ರಮಗಳು ಬೇಕಾಗುತ್ತವೆ. ಆದರೆ ಬಳಕೆದಾರರು ಸ್ವತಃ ಫೋಟೋಗಳನ್ನು ಅಪ್ ಲೋಡ್ ಮಾಡಿದಾಗ, ಅವರು ಅನುಮತಿಗಳನ್ನು ಸಹ ಒದಗಿಸುತ್ತಾರೆ, ಡೇಟಾವನ್ನು ಪ್ರಕ್ರಿಯೆಗೊಳಿಸಲು OpenAI ಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತಾರೆ.