ಬೆಟ್ಟಿಂಗ್ ಆಪ್ ಕೇಸ್‌ | ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

- Advertisement -

- Advertisement -

ರಾಯ್ಪುರ್‌: ಮಹಾದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಛತ್ತಿಸ್‌ಗಢದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಭೂಪೇಶ್‌ ಬಘೇಲ್‌ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ ಇಂದು ಬೆಳಗ್ಗೆ ದಾಳಿ ನಡೆಸಿದೆ.

ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳ ತಂಡ ರಾಯ್‌ಪುರ ಮತ್ತು ಭಿಲಾಯಿ ಎರಡೂ ಪ್ರದೇಶದಲ್ಲಿರುವ ಬಘೇಲ್‌ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಕಳೆದ ಮಾರ್ಚ್ 10 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ನಿವಾಸ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ನಿವಾಸ, ಸೇರಿ ದುರ್ಗ್ ಜಿಲ್ಲೆಯ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ನಡೆಸಿತ್ತು.

ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಈ ಹಿಂದೆಯೇ ಹೇಳಿತ್ತು. ಈ ಹಿಂದೆ ದಾಳಿ ನಡೆಸಿದಾಗ 5.39 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಜೊತೆಗೆ ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು.

- Advertisement -


Must Read

Related Articles