Home ಟಾಪ್ ಸುದ್ದಿಗಳು ಬೆಂಗಳೂರು- ಮಂಗಳೂರು ಮಧ್ಯೆ ವಿಸ್ಟಾಡೋಮ್ ರೈಲು | ಹೇಗಿದೆ ಗೊತ್ತಾ?

ಬೆಂಗಳೂರು- ಮಂಗಳೂರು ಮಧ್ಯೆ ವಿಸ್ಟಾಡೋಮ್ ರೈಲು | ಹೇಗಿದೆ ಗೊತ್ತಾ?

ಬೆಂಗಳೂರು: ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಸ್ಟಾಡೋಮ್ ಕೋಚ್ ನಲ್ಲಿ ಕುಳಿತು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಕಾಲ ಕಡೆಗೂ ಕೂಡಿ ಬಂದಿದೆ.ನೈಋತ್ಯ ರೈಲ್ವೆ ಸದರಿ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ತಲಾ ಎರಡು ವಿಸ್ಟಾಡೋಮ್ ಕೋಚ್ ಅಳವಡಿಸುತ್ತಿದ್ದು, ಜು. 7 ರಿಂದ ಪ್ರಯಾಣಿಕರು ಈ ವಿಸ್ಟಾಡೋಮ್ ಕೋಚ್ ನಲ್ಲಿ ಕುಳಿತು ಪಶ್ಚಿಮ ಘಟ್ಟದ ಪ್ರಕೃತಿ ರಮನೀಯ ಸಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.


ಇನ್ನು ವಿಸ್ಟಾಡೋಮ್ ಕೋಚ್ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್, ಪುಟ್ಟ ರೆಫ್ರಿಜರೇಟರ್ ಗಳು ಸೇರಿದಂತೆ ಹಲವು ಸೌಲಭ್ಯಗಳು ಇವೆ.
ವಿಸ್ಟಾಡೋಮ್ ರೈಲು ಮೊದಲು ಯಶವಂತಪುರ- ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಸ್ಪೆಷಲ್ ಜು.7 ರಂದು ಯಶವಂತ ಪುರದಿಂದ ಹೊರಡಲಿದೆ. ಎರಡನೇ ರೈಲು ಯಶವಂತಪುರ ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ಸ್ಪೆಷಲ್ ಜು. 8 ರಂದು ಯಶವಂತಪುರದಿಂದ ಹಾಗೂ ಮೂರನೇ ರೈಲು ಯಶವಂತಪುರ ಮಂಗಳೂರು ಜಂಕ್ಷನ್ –ಯಶವಂತಪುರ ಸ್ಪೆಷಲ್ ಎಕ್ಸ್ ಪ್ರೆಸ್ ಜು.10 ರಂದು ಯಶವಂತಪುರದಿಂದ ಹೊರಡಲಿದೆ. ಅಂತೆಯೇ ಈ ರೈಲುಗಳ ಸಂಚಾರದ ಮೂರನೇ ದಿನ ಮಂಗಳೂರು ಜಂಕ್ಷನ್ ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬರಲಿವೆ.


ಈ ರೈಲುಗಳ ವಿಸ್ಟಾಡೋಮ್ ಕೋಚ್ ನಲ್ಲಿ ಪ್ರಯಾಣಿಸಲು ಜು.3 ರಿಂದ ಮುಂಗಡ ಟಿಕೆಟ್ ಬುಂಕಿಂಗ್ ಗೆ ಅವಕಾಶ ನೀಡಲಾಗಿದೆ. ಯಶವಂತಪುರ- ಮಂಗಳೂರ ಮಾರ್ಗದಲ್ಲಿ ಸಂಚರಿಸುವ ರೈಲಿನ ವಿಸ್ಟಾಡೋಮ್ ಕೋಚ್ ನಲ್ಲಿ ಪ್ರಯಾಣಿಸಲು ಒಬ್ಬರಿಗೆ ಮೂಲ ಟಿಕೆಟ್ ದರ 1470 ರೂ, ಶೇ. 5 ರಷ್ಟು ಜಿಎಸ್ಟಿ, ರಿಸರ್ವೆಶನ್ ಶುಲ್ಕ 60 ರೂ ಸೂಪರ್ ಫಾಸ್ಟ್ ಚಾರ್ಚ್ ನಿಗದಿ ಪಡಿಸಲಾಗಿದೆ.

Join Whatsapp
Exit mobile version