ಬೆಂಗಳೂರಿನ ಶಾಲೆಗಳಲ್ಲಿ ಮತ್ತೆ ಆನ್‌ಲೈನ್‌ ತರಗತಿ ಪ್ರಾರಂಭ!

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಕೆಲವು ಶಾಲೆಗಳು ಸಾಂಕ್ರಾಮಿಕ ಸಮಯದಲ್ಲಿ ಅಳವಡಿಸಿಕೊಂಡ ಆನ್‌ಲೈನ್ ತರಗತಿಗಳನ್ನು ನಡೆಸಲು ಮುಂದಾಗಿವೆ. ಇದಕ್ಕೆ ಕಾರಣ ಮಳೆಯು ಸೃಷ್ಟಿಸಿದ ಅವಾಂತರವಾಗಿದೆ. ಮಳೆಯಿಂದಾಗಿ ಜಲಾವೃತ, ಕೆಟ್ಟ ರಸ್ತೆಗಳು ಮತ್ತು ಟ್ರಾಫಿಕ್ ದಟ್ಟಣೆಯಂತಹ ಸಮಸ್ಯೆಗಳು ಉಲ್ಬಣಗೊಂಡಿದೆ. ರಸ್ತೆಯಲ್ಲಿ ನೀರಿನ ಪ್ರವಾಹ ಮತ್ತು ಇತರ ಅಪಾಯಗಳ ಭಯದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ನಮಗೆ ರಸ್ತೆ ಬಗ್ಗೆ ಅಧಿಕ ಭಯವಿದೆ ಎಂದು ಪೋಷಕರು ಹೇಳಿದ್ದಾರೆ.

- Advertisement -

ಈ ಹಿನ್ನೆಲೆಯಲ್ಲಿ ಕಳಪೆ ಹವಾಮಾನ ಪರಿಸ್ಥಿತಿಗಳನ್ನು ನೋಡಿ ಕೆಲವು ಶಾಲೆಗಳು ಈಗಾಗಲೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ನಗರದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ವೈಟ್‌ಫೀಲ್ಡ್‌ನಲ್ಲಿರುವ ಇನ್ವೆಂಚರ್ ಅಕಾಡೆಮಿ, ವಾರದಿಂದಲೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.

ಉತ್ತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳು, ಪ್ರವಾಹ ಮತ್ತು ಕಳಪೆ ಮೂಲಸೌಕರ್ಯದಿಂದಾಗಿ ಇತರ ಖಾಸಗಿ ಶಾಲೆಗಳು ಸಹ ಆನ್‌ಲೈನ್‌ ತರಗತಿ ನಡೆಸಲು ಮುಂದಾಗಿವೆ.

- Advertisement -

ಬೆಂಗಳೂರಿನಲ್ಲಿ ನಿತ್ಯ ಮಧ್ಯಾಹ್ನದ ನಂತರ ಸುರಿಯುತ್ತಿರುವ ಭಾರಿ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಹೊರ ವರ್ತುಲ ರಸ್ತೆಗಳು, ವೇಟ್‌ಫೀಲ್ಡ್‌ನ ಭಾಗದ ರಸ್ತೆಗಳಂತು ನಡುಮಟ್ಟದ ನೀರು ನಿಂತು ಇನ್ನೂ ತೆರವು ಆಗಿಲ್ಲ. ಇದೀಗ ಮತ್ತೆ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು ಇದು ಸೆಪ್ಟೆಂಬರ್‌ 6ರವರೆಗೂ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Join Whatsapp
Exit mobile version