Home ಟಾಪ್ ಸುದ್ದಿಗಳು ಸರ್ಕಾರಿ ಬಸ್ ನಲ್ಲಿ ಕೇಸರಿ ಧ್ವಜ: ವಿವಾದವಾಗುತ್ತಿದ್ದಂತೆಯೇ ತೆರವುಗೊಳಿಸಿದ BMTC

ಸರ್ಕಾರಿ ಬಸ್ ನಲ್ಲಿ ಕೇಸರಿ ಧ್ವಜ: ವಿವಾದವಾಗುತ್ತಿದ್ದಂತೆಯೇ ತೆರವುಗೊಳಿಸಿದ BMTC

ಮೈಸೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC ) ಗೆ ಸೇರಿದ ಸಾರ್ವಜನಿಕ ಬಸ್ಸನ್ನು ಸಂಘಪರಿವಾರ ಅಳವಡಿಸುವ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ವಿರೋಧ ಮತ್ತು ವಿವಾದವಾಗುತ್ತಿದ್ದಂತೆಯೇ BMTC ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಸರ್ಕಾರಿ ವಾಹನಗಳನ್ನು ಕೇಸರೀಕರಣಗೊಳಿಸುತ್ತಿರುವ ಬಗ್ಗೆ ಪ್ರಯಾಣಿಕರಲ್ಲೊಬ್ಬರಾದ ಸೈಯ್ಯದ್ ಮೊಯಿನ್, ತನ್ನ ಟ್ವಿಟ್ಟರ್ ನಲ್ಲಿ @BMTC_BENGALURU ಹ್ಯಾಶ್ ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡುವ ಮೂಲಕ BMTC ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಾತ್ರವಲ್ಲ ಸರ್ಕಾರ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಸಹ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದರು.

ಘಟನೆಯ ಕುರಿತು BMTC ಗೆ ದೂರನ್ನು ನೀಡಿದ ಹಿನ್ನೆಲೆಯಲ್ಲಿ ಧ್ವಜಗಳನ್ನು ತೆರವುಗೊಳಿಸಿದೆ ಮತ್ತು ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು BMTC ಸಂಸ್ಥೆ ತಿಳಿಸಿದೆ.

Join Whatsapp
Exit mobile version