Home ಟಾಪ್ ಸುದ್ದಿಗಳು ರಾಮಮಂದಿರ ಮಾದರಿಯಲ್ಲೇ ನಿರ್ಮಾಣವಾಗಲಿದೆ ಅಯೋಧ್ಯೆ ರೈಲ್ವೇ ನಿಲ್ದಾಣ!

ರಾಮಮಂದಿರ ಮಾದರಿಯಲ್ಲೇ ನಿರ್ಮಾಣವಾಗಲಿದೆ ಅಯೋಧ್ಯೆ ರೈಲ್ವೇ ನಿಲ್ದಾಣ!

ಅಯೋಧ್ಯೆ: ವಿಧಾನಸಭಾ ಚುನಾವಣೆಗೂ ಮುನ್ನವೇ ಅಯೋಧ್ಯೆಯಲ್ಲಿ ರೈಲ್ವೇ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ರಾಮಮಂದಿರದ ಮಾದರಿಯಲ್ಲೇ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ.

ರೈಲ್ವೇ ನಿಲ್ದಾಣದ ನಿರ್ಮಾಣವು 2018 ರಲ್ಲಿ ಪ್ರಾರಂಭವಾಗಿದ್ದು, 2022ರ ಮಾರ್ಚ್ 22 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಸುಮಾರು 126 ಕೋಟಿ ಮತ್ತು ಎರಡನೇ ಹಂತಕ್ಕೆ 300 ಕೋಟಿ ವೆಚ್ಚವಾಗಲಿದೆ.

ರಾಮಮಂದಿರ ನಿರ್ಮಾಣಕ್ಕೆ ಬಳಸಿದ ಕಲ್ಲುಗಳನ್ನೇ ರೈಲ್ವೇ ನಿಲ್ದಾಣದ ನಿರ್ಮಾಣಕ್ಕೂ ಬಳಸಲಾಗಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ.

Join Whatsapp
Exit mobile version