Home ಕ್ರೀಡೆ ಭಾನುವಾರ ಬೆಂಗಳೂರಿನಲ್ಲಿ ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್

ಭಾನುವಾರ ಬೆಂಗಳೂರಿನಲ್ಲಿ ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್

ಕೋವಿಡ್‌-19 ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಟಿಸಿಎಸ್‌ ಬೆಂಗಳೂರು ವಿಶ್ವ 10ಕೆ ಸ್ಪರ್ಧೆಗೆ ಭಾನುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ.


5000 ಮೀಟರ್ ಓಟದ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಹಾಲಿ ವಿಶ್ವ ಚಾಂಪಿಯನ್‌ಗಳಾಗಿರುವ ಇಥಿಯೋಪಿಯಾದ ಮುಕ್ತಾರ್ ಇದ್ರಿಸ್‌ ಮತ್ತು ಕೆನ್ಯಾದ ಹೆಲೆನ್ ಒಬಿರಿ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 2022ರಆವೃತ್ತಿಯ ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ. 5000 ಮೀಟರ್‌ ವಿಭಾಗದಲ್ಲಿ ಎರಡು ಬಾರಿ ವಿಶ್ವಚಾಂಪಿಯನ್‌ಷಿಪ್ ಗೆದ್ದಿರುವ ಇದ್ರಿಸ್‌, ಈ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದು, ಬೆಂಗಳೂರು ಸ್ಪರ್ಧೆಯನ್ನು ಪೂರ್ವಸಿದ್ಧತೆಯಾಗಿ ಬಳಸಿಕೊಳ್ಳಲಿದ್ದಾರೆ.


2019ರ ಟಿಸಿಎಸ್‌ ಬೆಂಗಳೂರು ವಿಶ್ವ 10ಕೆ ಪುರುಷರ ವಿಭಾಗದ ಚಾಂಪಿಯನ್ ಇಥಿಯೋಪಿಯಾದ ಅಂಡಾ ಮಕ್’ ಬೆಲಿಹು ಭಾನುವಾರದ ರೇಸ್‌ನಲ್ಲಿ ಪೋಡಿಯಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇಥಿಯೋಪಿಯಾದ ಮತ್ತೊಬ್ಬ ದೂರದ ಓಟಗಾರ ಮುಕ್ತಾರ್, ಎಡ್ರಿಸ್, ಮುಕ್ತಾರ್ ಇದ್ರಿಸ್‌ ಮತ್ತು ಅಂಡಾ ಮಕ್’ ಬೆಲಿಹು ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಮಹಿಳಾ ವಿಭಾಗದಲ್ಲಿ ಹೆಲೆನ್ ಕಳೆದ ಎರಡು 5000 ಮೀಟರ್ ಓಟದಲ್ಲಿ ವಿಶ್ವಚಾಂಪಿಯನ್‌ಷಿಪ್‌ ಪ್ರಶಸ್ತಿ ಜಯಿಸಿದ್ದಾರೆ.


1.60 ಕೋಟಿ ರೂ. ಬಹುಮಾನ ಮೊತ್ತದ ಸ್ಪರ್ಧೆಯಲ್ಲಿ ವಿಶ್ವದ ಎಲೈಟ್‌ ಅಥ್ಲಿಟ್‌ಗಳು ಹಾಗೂ ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿ ವಿಶ್ವ 10ಕೆ ಓಟವನ್ನು ಎರಡು ಸ್ವರೂಪದಲ್ಲಿ (ಮೈದಾನ ಮತ್ತು ವರ್ಚುವಲ್ ಓಟ) ನಡೆಸಲಾಗುತ್ತಿದೆ.
ಮೈದಾನದಲ್ಲಿ ನಡೆಯುವ ಸ್ಪರ್ಧೆಗಳು ನಾಲ್ಕು ವಿಭಾಗಗಳನ್ನು ಹೊಂದಿದೆ. ಓಪನ್‌ 10ಕೆ, ಮಜ್ಜಾ ರನ್‌ (5 ಕಿ.ಮೀ.), ಹಿರಿಯ ನಾಗರಿಕರ ಓಟ(4.2 ಕಿ.ಮೀ.), ಚಾಂಪಿಯನ್ಸ್‌ ವಿತ್‌ ಡಿಸಬಿಲಿಟಿ (4.2 ಕಿ.ಮೀ.).

Join Whatsapp
Exit mobile version