ಬೆಂಗಳೂರು ಮೂಲದ ಪ್ರಣವ್ ಆನಂದ್ ಭಾರತದ 76ನೇ ಚೆಸ್ ಗ್ರ್ಯಾಂಡ್ ಮಾಸ್ಟರ್

Prasthutha|

ನವದೆಹಲಿ: ರೊಮೇನಿಯಾದ ಮಾಮಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರು ಮೂಲದ ಪ್ರಣವ್ ಆನಂದ್ ಅವರು 2,500 ಎಲೋ ಗಡಿ ದಾಟಿ ಭಾರತದ 76 ನೇ ಗ್ರ್ಯಾಂಡ್ ಮಾಸ್ಟರ್ (GM) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

ಪ್ರಶಸ್ತಿಗೆ ಅಗತ್ಯವಾದ ಇತರ ಅಗತ್ಯಗಳನ್ನು ಈಗಾಗಲೇ ಪೂರೈಸಿರುವ 15 ವರ್ಷದ ಪ್ರಣವ್ ಆನಂದ್, ಗುರುವಾರ ತಡರಾತ್ರಿ ಈ ಗೌರವವನ್ನು ಸಾಧಿಸಿದ್ದಾರೆ.

ಚೆಸ್ ಬಗ್ಗೆ ಪ್ರಣವ್ ಆನಂದ್ ಸಾಕಷ್ಟು ಒಲವು ಹೊಂದಿದ್ದಾರೆ ಎಂದು ಆನಂದ್ ಅವರ ಕೋಚ್ ವಿ ಸರವಣನ್ ಹೇಳಿದ್ದಾರೆ.

- Advertisement -

GM ಆಗಲು, ಆಟಗಾರನು ಮೂರು GM ಮಾನದಂಡಗಳನ್ನು ಪಡೆದುಕೊಳ್ಳಬೇಕು. 2,500 Elo ಪಾಯಿಂಟ್‌ಗಳ ಲೈವ್ ರೇಟಿಂಗ್ ಅನ್ನು ದಾಟಬೇಕು. ಜುಲೈನಲ್ಲಿ ಸ್ವಿಟ್ಜರ್ಲೆಂಡ್ ನಲ್ಲಿ ನಡೆದ 55 ನೇ ಬಿಯೆಲ್ ಚೆಸ್ ಫೆಸ್ಟಿವಲ್ ನಲ್ಲಿ ಆನಂದ್ ಮೂರನೇ ಮತ್ತು ಅಂತಿಮ GM ನಾರ್ಮ್ ಗಳಿಸಿದ್ದರು

ಅಂತಿಮ ಸುತ್ತಿನಲ್ಲಿ ಸ್ಪೇನ್ ನ ಐದನೇ ಜಿಎಂ ಎಡ್ವರ್ಡೊ ಇಟುರ್ರಿಜಾಗಾ ಬೊನೆಲ್ಲಿ (2619) ವಿರುದ್ಧ ತಮ್ಮ ಆಟವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಆನಂದ್ ತಮ್ಮ ಮೂರನೇ ಮತ್ತು  ಅಂತಿಮ GM ಮಾನದಂಡವನ್ನು ಪಡೆದುಕೊಂಡಿದ್ದಾರೆ.

Join Whatsapp
Exit mobile version