Home ಟಾಪ್ ಸುದ್ದಿಗಳು ಬಂಗಾಳ: ಅತ್ಯಾಚಾರ ಆರೋಪದ ಮೇಲೆ ಇಬ್ಬರು ಬಿಎಸ್ಎಫ್ ಸಿಬ್ಬಂದಿ ಬಂಧನ

ಬಂಗಾಳ: ಅತ್ಯಾಚಾರ ಆರೋಪದ ಮೇಲೆ ಇಬ್ಬರು ಬಿಎಸ್ಎಫ್ ಸಿಬ್ಬಂದಿ ಬಂಧನ

ನವದೆಹಲಿ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ 68 ನೇ ಬೆಟಾಲಿಯನ್ನ ಇಬ್ಬರು ಸಿಬ್ಬಂದಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಭಾರತ-ಬಾಂಗ್ಲಾದೇಶ ಗಡಿ ಹೊರಠಾಣೆಯಿಂದ ಬಂಧಿಸಿದ್ದಾರೆ.

ಸಹಾಯಕ ಸಬ್ ಇನ್ಸ್ ಪೆಕ್ಟರ್ ಎಸ್ ಪಿ ಚೆರೊ ಮತ್ತು ಯೋಧ ಅಲ್ತಾಫ್ ಹುಸೇನ್ ಅವರನ್ನು ಬಾಗ್ಡಾದ ಬಜಿತ್ ಪುರ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು ಸಂತ್ರಸ್ತೆ ಮಹಿಳೆ ಗುರುವಾರ ರಾತ್ರಿ ಬಸಿರ್ಹತ್ ನಿಂದ ಹಿಂದಿರುಗುವಾಗ ಬಿಎಸ್ಎಫ್ ಇಬ್ಬರು ಪುರುಷರು ಆಕೆಯನ್ನು ತಡೆದು, ಹತ್ತಿರದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಎಂದು ತಿಳಿದು ಬಂದಿದೆ.

ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ತರುಣ್ ದಾಸ್ ಹೇಳಿದ್ದಾರೆ.

ಬಿಎಸ್ಎಫ್ ಇಂತಹ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ, ಗಡಿಭಾಗದ ಹಳ್ಳಿಗಳ ಜನರಿಂದ ಆಗಾಗ್ಗೆ ಬಿಎಸ್ಎಫ್ ಮೇಲೆ ಚಿತ್ರಹಿಂಸೆ ಮತ್ತು ಅತ್ಯಾಚಾರದ ಆರೋಪಗಳು ಕೇಳಿ ಬಂದಿದೆ. ಆದರೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿರುವುದು ಕಂಡು ಬಂದಿಲ್ಲ.

Join Whatsapp
Exit mobile version