►►ಶಾಸಕ ಹರೀಶ್ ಪೂಂಜಾ ಕಚೇರಿಗೆ ಟೋಪಿ, ಶಾಲು ರವಾನೆ
ಬೆಳ್ತಂಗಡಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಮುಸ್ಲಿಮರ ಮತ ಬೇಡ ಎಂದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅದೇ ಅಲ್ಪಸಂಖ್ಯಾತರ ಸಮಾವೇಶ ನಡೆಸಿ ಓಲೈಕೆ ಮಾಡುತ್ತಿದ್ದಾರೆ ಎಂದು ಬೆಳ್ತಂಗಡಿ ತಾಲೂಕಿನ ಭಾರತ ಕಮ್ಯುನಿಸ್ಟ್ ಪಕ್ಷ(ಎಂ) ಸಮಿತಿಯ ಸದಸ್ಯ ಶೇಖರ ಲಾಯಿಲ ಆರೋಪಿಸಿದ್ದು, ಅಲ್ಲದೆ ಶಾಸಕನ ಕಚೇರಿಗೆ ಟೋಪಿ, ಶಾಲು ರವಾನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಒಂದು ಸಮುದಾಯವನ್ನು ಚುನಾವಣೆಗೆ ತಯಾರು ಮಾಡುವ ಉದ್ದೇಶದಿಂದ ಸಾರ್ವಜನಿಕ ಸಭೆಯಲ್ಲಿ ಅದರಲ್ಲೂ ಧಾರ್ಮಿಕ ಸಭೆಯಲ್ಲಿ ನನಗೆ ಮುಸ್ಲಿಮರ ಮತ ಬೇಡ ಎಂದು ಹೇಳುವುದು ಇನ್ನೊಂದು ಕಡೆ ಶಾಸಕನ ನೇತೃತ್ವದಲ್ಲಿ ಜೂನ್ 22ರಂದು ಬೆಳ್ತಂಗಡಿಯಲ್ಲಿ ‘ಅಲ್ಪಸಂಖ್ಯಾತರ ಸಮಾವೇಶ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಬಿಜೆಪಿಯ ದ್ವಂದ್ವ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಶೇಖರ್ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.