ಬೆಳಗಾವಿ: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯೋರ್ವಳನ್ನು ಗಂಡನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಂಜುಳಾ(23) ಕೊಲೆಗೀಡಾದ ಯುವತಿ. ಬೋರೋಸ್ ಕೊಲೆ ಆರೋಪಿ.
ರೀಲ್ಸ್ ಮಾಡುತ್ತಿದ್ದ ಮಂಜುಳಾರನ್ನು ಪ್ರೀತಿ ಬೀರೇಸ್ ನಿವೇದಿಸಿದ್ದನು. ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುತ್ತಿದ್ದ ಮಂಜುಳಾರನ್ನು ಬೋರೇಶ್ ಪ್ರೀತಿಸಿ ಮದುವೆಯಾಗಿದ್ದನು. ಪೋಷಕರ ವಿರೋಧದ ನಡುವೆ ಆಕೆ ಬೋರೇಶ್ ನನ್ನು ವರಿಸಿದ್ದಳು. ಬೋರೇಸ್ ಹೆಂಡತಿಯಾದವಳನ್ನು ಅಮಾನವೀಯವಾಗಿ ಕೊಂದು ಹಾಕಿದ್ದಾನೆ.
ಒಂದು ವರ್ಷ ಚೆನ್ನಾಗಿ ಜೀವನ ನಡೆಸಿದ ಗಂಡ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವರದಕ್ಷಿಣೆ ತರುವಂತೆ ಒತ್ತಾಯಿಸಿ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.