ಉತ್ತರ ಇಸ್ರೇಲಿ ಬಂದರು ನಗರದ ಮೇಲೆ ಹಿಜ್ಬುಲ್ಲಾ ಮಂಗಳವಾರ ನೂರಕ್ಕಿಂತ ಅಧಿಕ ರಾಕೆಟ್‌ಗಳಿಂದ ದಾಳಿ ಮಾಡಿದೆ.
ಈ ಮೂಲಕ IDF ಸ್ಟ್ರೈಕ್‌ಗಳ ಹೊರತಾಗಿಯೂ ತನ್ನ ಮಿಲಿಟರಿ ಸಾಮರ್ಥ್ಯಗಳು “ಉತ್ತಮವಾಗಿವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ನಗರದ ಮೇಲೆ ಹಾರಿಸಲಾಗಿದೆ. ಹೆಚ್ಚಿನ ರಾಕೆಟ್‌ಗಳನ್ನು ಐರನ್ ಡೋಮ್ ವ್ಯವಸ್ಥೆಯಿಂದ ತಡೆಹಿಡಿಯಲ್ಪಟ್ಟವು. ಆದರೂ ಕೆಲವು ಹಾಯ್ಫಾ ಉಪನಗರಗಳಾದ ಕಿರ್ಯಾತ್ ಯಾಮ್ ಮತ್ತು ಕಿರ್ಯಾತ್ ಮೊಟ್ಜ್‌ಕಿನ್‌ನಲ್ಲಿ ಸ್ಫೋಟಗೊಂಡಿದೆ ಎಂದು ಇಸ್ರೇಲ್ ಭದ್ರತಾ ಪಡೆಗಳು ತಿಳಿಸಿವೆ.
ದಾಳಿ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನುಳಿದಂತೆ ಹಲವು ಇಸ್ರೇಲಿಗರ ಮನೆಗಳು ಹಾನಿಯಾಗಿದೆ.