Home ಟಾಪ್ ಸುದ್ದಿಗಳು ಗೋಮಾಂಸ ನಿಷೇಧ: ಗುವಾಹಟಿ ಹೈಕೋರ್ಟ್ ನೋಟಿಸ್

ಗೋಮಾಂಸ ನಿಷೇಧ: ಗುವಾಹಟಿ ಹೈಕೋರ್ಟ್ ನೋಟಿಸ್

ಗುವಾಹಟಿ: ಅಸ್ಸಾಂನ ಸೋನಾರಿ ಮುನ್ಸಿಪಲ್ ಪ್ರದೇಶದಲ್ಲಿ ಗೋಮಾಂಸ ಮಾರಾಟಕ್ಕೆ “ಸಂಪೂರ್ಣ ನಿಷೇಧ” ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಗುವಾಹಟಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 2021 ರ ಸಂಪೂರ್ಣ ಗೋಮಾಂಸ ನಿಷೇಧದ ಬಗ್ಗೆ ಯೋಚಿಸುತ್ತದೆಯೇ ಅಥವಾ ಅಂತಹ ವ್ಯವಹಾರವನ್ನು ನಡೆಸಲು ಮುನ್ಸಿಪಲ್ ಕಾರ್ಪೊರೇಷನ್ ಸೂಕ್ತ ಸ್ಥಳವನ್ನು ಮಂಜೂರು ಮಾಡಲು ಬದ್ಧವಾಗಿದೆಯೇ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರನ್ನು ಒಳಗೊಂಡ ಏಕಸದಸ್ಯ ಪೀಠ ಪ್ರಶ್ನಿಸಿದೆ.

ಕಾಯ್ದೆಯ ಸೆಕ್ಷನ್ 8 ಅನ್ನು ಉಲ್ಲೇಖಿಸಿ ಜುಲೈ 15 ರಿಂದ ಗೋಮಾಂಸ ಮಾರಾಟದ ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದ ಸೋನಾರಿ ಮುನ್ಸಿಪಲ್ ಬೋರ್ಡ್ ನ ಕಾರ್ಯನಿರ್ವಾಹಕ ಅಧಿಕಾರಿ ಜೂನ್ 30 ರಂದು ಹೊರಡಿಸಿದ ನೋಟಿಸ್ ಗೆ  ವಿರುದ್ಧವಾಗಿ ಈ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿದಾರರ ಪರ ವಕೀಲರು ಈ ಅಧಿನಿಯಮವು ಸಂಪೂರ್ಣ ನಿಷೇಧದ ಬಗ್ಗೆ ಯೋಚಿಸುವುದಿಲ್ಲ, ಏಕೆಂದರೆ ತಮ್ಮ ವ್ಯವಹಾರವು ಪೂರ್ವಜರ ಕಾಲದಿಂದ ಬಂದಿದ್ದು,  ಅದು ವ್ಯವಹಾರವನ್ನು ನಡೆಸುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅವರು ವಾದಿಸಿದರು.

ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಹೈಕೋರ್ಟ್ ರಾಜ್ಯ ಸರ್ಕಾರ, ಮುನ್ಸಿಪಲ್ ಬೋರ್ಡ್ ಗೆ ನೋಟಿಸ್ ಜಾರಿ ಮಾಡಿತು.

Join Whatsapp
Exit mobile version