Home ಟಾಪ್ ಸುದ್ದಿಗಳು ಭಾರೀ ವಿವಾದ ಬಳಿಕ ಎಚ್ಚೆತ್ತ ಸರ್ಕಾರ‌ : ಆದೇಶ ಪ್ರತಿಯಲ್ಲಿದ್ದ ಅಕ್ಷರ ಲೋಪ ಸರಿಪಡಿಸಿ ಸುತ್ತೋಲೆ...

ಭಾರೀ ವಿವಾದ ಬಳಿಕ ಎಚ್ಚೆತ್ತ ಸರ್ಕಾರ‌ : ಆದೇಶ ಪ್ರತಿಯಲ್ಲಿದ್ದ ಅಕ್ಷರ ಲೋಪ ಸರಿಪಡಿಸಿ ಸುತ್ತೋಲೆ ಬಿಡುಗಡೆ

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ ವಿಡಿಯೋ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ‌ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರಕಾರ ಮಧ್ಯರಾತ್ರಿ ಆದೇಶವನ್ನು ಹಿಂಪಡೆದಿತ್ತು. ಆದರೆ ಹಿಂಪಡೆದ ಆದೇಶ ಪ್ರತಿಯಲ್ಲಿ ಸಾಕಷ್ಟು ಲೋಪಗಳಿದ್ದು, ಇದು ಕನ್ನಡಿಗರನ್ನು ಕೆರಳಿಸಿತ್ತು.


ಕರ್ನಾಟಕ ಹೆಸರನ್ನು ಸರ್ಕಾರ ತಪ್ಪಾಗಿ ಬರೆದಿದ್ದು, ಆದೇಶದಲ್ಲಿ ಕರ್ನಾಟಕ ಬದಲು ‘ಕರ್ನಾಟಾ’ ಎಂದು, ಪ್ರಸ್ತಾವನೆ ಬದಲು ‘ಪ್ರಸತ್ತಾವನೆ’ ಎಂದು ಉಲ್ಲೇಖ ಮಾಡಲಾಗಿದೆ. ಭಾಗ ವನ್ನು ಬಾಗ ಎಂದು ಬರೆಯಲಾಗಿದ್ದು ಸಾಮಾಜಿಕ ವಲಯದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು


ಅಕ್ಷರ ದೋಷಗಳಿದ್ದ ಆದೇಶ ಪ್ರತಿ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಅಕ್ಷರ ದೋಷಗಳನ್ನು ಸರಿಪಡಿಸಿಕೊಂಡು‌ ಹೊಸ ಆದೇಶ ಪ್ರತಿ‌ ಹೊರಡಿಸಿದೆ.

Join Whatsapp
Exit mobile version