Home ಟಾಪ್ ಸುದ್ದಿಗಳು ಸಾಕ್ಷರತಾ ದಿನಾಚರಣೆಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಚಾಲನೆ

ಸಾಕ್ಷರತಾ ದಿನಾಚರಣೆಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಚಾಲನೆ

ಬೆಂಗಳೂರು: 5ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ/ಸಪ್ತಾಹ-2021 ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ಸಾಕ್ಷರತಾ ಕಾರ್ಯಕ್ರಮದ ಪರಿಷ್ಕೃತ ಪಠ್ಯ ಪುಸ್ತಕ ‘ಬಾಳಿಗೆ ಬೆಳಕು ಮತ್ತು ‘ಬರೆಯೋಣ ಬನ್ನಿ’ ಅಭ್ಯಾಸ ಪುಸ್ತಕ ಬಿಡುಗಡೆ ಮಾಡಿದರು.


ಕೇಂದ್ರದ ಪರಿಷ್ಕೃತ ‘ಪಢನಾ ಲಿಖನಾ’ (ಓದುವುದು-ಬರೆಯುವುದು) ಅಭಿಯಾನ ಕಲಿಕಾ ಕೇಂದ್ರಗಳು ಹಾಗೂ 2021-22ನೇ ಸಾಲಿನ ಜಿಲ್ಲಾ ವಲಯದ ಲಿಂಕ್ ಅನುದಾನ ಸಾಕ್ಷರತಾ ಕಾರ್ಯಕ್ರಮದ ಕಲಿಕಾ ಕೇಂದ್ರವನ್ನು ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಆರ್. ಉಮಾಶಂಕರ್, ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಸುಷಮಾ ಗೋಡಬೋಲೆ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp
Exit mobile version