Home ಜಾಲತಾಣದಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ BBMP ಆರೋಗ್ಯಾಧಿಕಾರಿ

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ BBMP ಆರೋಗ್ಯಾಧಿಕಾರಿ

ಬೆಂಗಳೂರು: 50 ಸಾವಿರ ರೂ. ಲಂಚ ಪಡೆಯುವಾಗ ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕಾಗಿ ಶ್ರೀನಿವಾಸ್ ಎಂಬುವರು ಗುತ್ತಿಗೆ ಪಡೆದಿದ್ದರು. ಇದಕ್ಕಾಗಿ ಸಿ.ವಿ.ರಾಮನ್​ನಗರದ ಬಿಬಿಎಂಪಿ ಆರೋಗ್ಯಾಧಿಕಾರಿ ವಿ.ಶಿವೇಗೌಡ 80 ಸಾವಿರ ಲಂಚ ಕೇಳಿದ್ದರು.

ಮುಂಗಡವಾಗಿ ಈಗಾಗಲೇ 30 ಸಾವಿರ ಲಂಚ ಪಡೆದಿದ್ದು, ಇನ್ನುಳಿದ 50 ಸಾವಿರ ರೂ. ಪಡೆಯುವ ವೇಳೆ ಹಲಸೂರು ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದಿದ್ದಾರೆ.

ಇತ್ತೀಚೆಗೆ ಲಂಚ ಸ್ವೀಕರಿಸುವಾಗ ಬೆಸ್ಕಾಂ ಸಹಾಯಕ ಇಂಜಿನಿಯರ್​ ಲೋಕಾಯುಕ್ತ ಬಲೆಗೆ ಬಿದಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬೆಸ್ಕಾಂ ಸಹಾಯಕ ಇಂಜಿನಿಯರ್​ ರಾಜೇಶ್ ವಿರುದ್ಧ ಎಫ್​ಐಆರ್​ ಕೂಡ ದಾಖಲು ಮಾಡಲಾಗಿತ್ತು.

Join Whatsapp
Exit mobile version