ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿನ ರಸ್ತೆಯಲ್ಲಿ ಪಿಎಫ್ ಐ ಬೆಂಬಲಿತ ಬರಹ ಪತ್ತೆಯಾಗಿದ್ದು, ಈ ಬಗ್ಗೆ ಬಿಜೆಪಿ ದೂರು ನೀಡಿದೆ.
ಕಿಡಿಗೇಡಿಗಳು ರಸ್ತೆಯಲ್ಲಿ “ಚಡ್ಡಿಗಳೆ ಎಚ್ಚರ. ಪಿ.ಎಫ್.ಐ. ನಾವು ಮರಳಿ ಬರುತ್ತೇವೆ” ಎಂದು ಬರೆದಿದ್ದಾರೆ.
ಸೋಮವಾರ ರಾತ್ರಿ ರಸ್ತೆಯಲ್ಲಿ ಸ್ಪ್ರೇ ಪೈಂಟ್ ನಲ್ಲಿ ಬರೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ನಿಷೇಧಿತ ಸಂಘಟನೆಯ ನಾಯಕರನ್ನು ಸಿಲುಕಿ ಹಾಕಲು ಈ ರೀತಿ ಕಿಡಿಗೇಡಿಗಳು ಮಾಡಿರಬಹುದು ಎಂದು ಸಾರ್ವಜನಿಕರು ದೂರಿದ್ದಾರೆ.