Home ಕರಾವಳಿ ಬಂಟ್ವಾಳ: ದ್ವಿಚಕ್ರ ವಾಹನ ಹರಿದು ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ ಸಾವು

ಬಂಟ್ವಾಳ: ದ್ವಿಚಕ್ರ ವಾಹನ ಹರಿದು ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ ಸಾವು

ಬಂಟ್ವಾಳ: ದ್ವಿಚಕ್ರ ವಾಹನ ಹರಿದು ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ತಡ ರಾತ್ರಿ ಮೆಲ್ಕಾರ್ ಸಮೀಪದ ಕೋಯನಜಲು ಎಂಬಲ್ಲಿ ನಡೆದಿದೆ.


ಅಪಘಾತದ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸಜೀಪ ಮುನ್ನೂರು ನಿವಾಸಿ ಕೃಷ್ಣ ಮೂರ್ತಿ ಹೇರಳ (50)ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಮೆಲ್ಕಾರ್ ಸಮೀಪದ ಪೆಟ್ರೋಲ್ ಪಂಪ್ ಬಳಿ ವ್ಯಕ್ತಿಯೋರ್ವರು ನಡೆದುಕೊಂಡು ಬಂದು, ರಸ್ತೆಯಲ್ಲಿ ಮಲಗುವ ದೃಶ್ಯ ಬಳಿಕ ಕೆಲವೇ ಹೊತ್ತಿನಲ್ಲಿ ದ್ವಿಚಕ್ರ ವಾಹನ ಮಲಗಿದ್ದ ವ್ಯಕ್ತಿಯ ಮೇಲೆ ಹರಿದು ಸ್ಕೂಟರ್ ಸವಾರ ಕೂಡ ರಸ್ತೆಗೆ ಎಳೆಯಲ್ಪಡುವ ದೃಶ್ಯ ಸೆರೆಯಾಗಿದೆ.
ಅಪಘಾತ ನಡೆಡ ಕೂಡಲೇ ಇಬ್ಬರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದ್ದು, ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.

Join Whatsapp
Exit mobile version