ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಾಲ್ವರಿಗೆ ಒಂದು ದಶಕದ ಹುಡುಕಾಟದ ಬಳಿಕ ರೂ. 40 ಲಕ್ಷ ಮೌಲ್ಯದ 8.22 ಕ್ಯಾರೆಟ್ ವಜ್ರ ದೊರತಿದೆ.
ಪಾನ್ನಾ ಕಲೆಕ್ಟರ್ ಸಂಜಯ್ ಕುಮಾರ್ ಮಿಶ್ರಾ ಅವರು ಈ ವಿಷಯವನ್ನು ಪತ್ರಕರ್ತರಿಗೆ ತಿಳಿಸಿದರು.
ಪನ್ನಾ ಜಿಲ್ಲೆಯ ತಪರಿಯನ್ ಪ್ರದೇಶದಲ್ಲಿ ಗುತ್ತಿಗೆಗೆ ಪಡೆದ ಜಾಗದಲ್ಲಿ ರತನ್ ಲಾಲ್ ಪ್ರಜಾಪತಿ ಮತ್ತು ಅವರ ತಂಡಕ್ಕೆ ಈ ವಜ್ರ ದೊರೆತಿದೆ. ವಜ್ರವನ್ನು ಹರಾಜು ಹಾಕಿದ ಮೇಲೆ ರಾಜಧನವನ್ನು ಇಟ್ಟುಕೊಂಡು ಉಳಿಕೆ ಹಣವನ್ನು ವಜ್ರ ಕಂಡುಹಿಡಿದ ನಾಲ್ವರಿಗೆ ನೀಡಲಾಗುತ್ತದೆ. ಈ ವಿಶೇಷ ವಜ್ರ ಸಹಿತ ಇತರ 139 ಸಾಮಾನ್ಯ ವಜ್ರಗಳ ಹರಾಜು ಸೆಪ್ಟೆಂಬರ್ 21ರಿಂದ ಆರಂಭವಾಗುತ್ತದೆ.