Home ಕ್ರೀಡೆ ನ್ಯೂಜಿಲೆಂಡ್ ನೆಲದಲ್ಲಿ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ..!

ನ್ಯೂಜಿಲೆಂಡ್ ನೆಲದಲ್ಲಿ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ..!

ಮೌಂಟ್ ಮ್ಯಾಂಗನುಯಿ: ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ 8 ವಿಕೆಟ್‌ಗಳ ಅಮೋಘ ಜಯ ಸಾಧಿಸುವ ಮೂಲಕ ಕಿವೀಸ್ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಟೆಸ್ಟ್-ಏಕದಿನ-T-20 ಸೇರಿದಂತೆ ಮೂರು ಆವೃತ್ತಿಗಳಲ್ಲಿ ನ್ಯೂಜಿಲೆಂಡ್ ಮೈದಾನದಲ್ಲಿ ಬಾಂಗ್ಲಾದೇಶ ದಾಖಲಿಸುತ್ತಿರುವ ಮೊತ್ತ ಮೊದಲ ಗೆಲುವು ಇದಾಗಿದೆ.

ಬೇ ಓವೆಲ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 147 ರನ್‌ಗಳಿಂದ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ ತಂಡ, ಕೊನೆಯ ದಿನದಾಟದಲ್ಲಿ ಕೇವಲ 22 ರನ್’ಗಳಿಸಿ 169 ರನ್‌ಗಳಿಗೆ ಸರ್ವಪತನ ಕಂಡಿತು. 40 ರನ್’ಗಳ ಸುಲಭ ಗೆಲುವಿನ ಗುರಿ ಪಡೆದ ಮೊಮಿನುಲ್ ಹಕ್ ಪಡೆ 16.5 ಓವರ್’ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ 42 ರನ್ ಪೇರಿಸಿ ಐತಿಹಾಸಿಕ ಗೆಲುವಿನ ನಗೆ ಬೀರಿತು. ಮೊದಲ ಇನಿಂಗ್ಸ್’ನಲ್ಲಿ ನ್ಯೂಜಿಲೆಂಡ್ 328 ರನ್’ಗಳಿಸಿದರೆ, ಬಾಂಗ್ಲಾದೇಶ 458 ರನ್‌’ಗಳಿಸಿ 130 ರನ್ ಮುನ್ನಡೆ ಸಾಧಿಸಿತ್ತು.

ಇಬಾದತ್ ಹುಸೇನ್ ದಾಳಿಗೆ ಬೆದರಿದ ಕಿವೀಸ್ !

ದ್ವಿತೀಯ ಇನ್ನಿಂಗ್ಸ್’ನಲ್ಲಿ ಬಾಂಗ್ಲಾ ವೇಗಿ ಇಬಾದತ್ ಹುಸೇನ್ 46 ರನ್’ಕೊಟ್ಟು 6 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್’ನ ಬ್ಯಾಟರ್’ಗಳಿಗೆ ದುಸ್ವಪ್ನವಾಗಿ ಕಾಡಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಟ ಪ್ರಶಸ್ತಿಯು ಹುಸೇನ್ ಪಾಲಾಯಿತು. ಈ ಮೂಲಕ ತವರಿನಲ್ಲಿ ನ್ಯೂಜಿಲೆಂಡ್ ತಂಡದ ಸತತ 17 ಪಂದ್ಯಗಳ ಗೆಲುವಿನ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ.

ಎರಡು ಪಂದ್ಯಗಳ ಕಿರು ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಕ್ರೈಸ್ಟ್’ಚರ್ಚ್’ನಲ್ಲಿ ಬುಧವಾರದಿಂದ ಆರಂಭವಾಗಲಿದೆ

Join Whatsapp
Exit mobile version