Home ಟಾಪ್ ಸುದ್ದಿಗಳು ಬೆಂಗಳೂರು | ಪ್ಯಾಲೆಸ್ತೀನ್​​ ಬೆಂಬಲಿಸಿ ಮೌನ ಪಾದಯಾತ್ರೆ: FIR ದಾಖಲು

ಬೆಂಗಳೂರು | ಪ್ಯಾಲೆಸ್ತೀನ್​​ ಬೆಂಬಲಿಸಿ ಮೌನ ಪಾದಯಾತ್ರೆ: FIR ದಾಖಲು

ಬೆಂಗಳೂರು: ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಮೌನ ಪ್ರತಿಭಟನೆ ನಡೆಸಿದವರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ ಐಆರ್ ದಾಖಲಿಸಿದ್ದಾರೆ.

ಪ್ರತಿಭಟನಾಕಾರರು ಅನುಮತಿ ಪಡೆಯದೆ ಮೌನ ಪಾದಯಾತ್ರೆ ನಡೆಸಿದ್ದಾರೆ ಎಂದು ಎಫ್​ ಐಆರ್ ದಾಖಲಿಸಲಾಗಿದೆ.

ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್‌ನಲ್ಲಿ 100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್‌ ಗೆ ಬೆಂಬಲ ಸೂಚಿಸಿ ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಮೌನ ನಡಿಗೆ ನಡೆಸಿದ್ದರು.

Join Whatsapp
Exit mobile version