Home ಕರಾವಳಿ ಬೆಂಗಳೂರಿನಲ್ಲಿ ಅಪಘಾತ: ಸುಳ್ಯದ ಯುವಕ ಸಾವು

ಬೆಂಗಳೂರಿನಲ್ಲಿ ಅಪಘಾತ: ಸುಳ್ಯದ ಯುವಕ ಸಾವು

ಸುಳ್ಯ: ಸುಳ್ಯದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಧರ್ಮಪಾಲ ಗೌಡ ಬಾಳೆಬೈಲು ಮತ್ತು ಕಮಲಾಕ್ಷಿ ದಂಪತಿ ಪುತ್ರ ಯತೀಶ್‌ ಬಾಳೆಬೈಲು (30) ಮೃತ ಯುವಕ.

ಯತೀಶ್‌ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅವಿವಾಹಿತರಾಗಿರುವ ಯತೀಶ್‌ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು.

Join Whatsapp
Exit mobile version