Home ಟಾಪ್ ಸುದ್ದಿಗಳು ಇಂದಿನಿಂದ ಅಹ್ಮದಾಬಾದ್ ನ ರಸ್ತೆ ಬದಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧ

ಇಂದಿನಿಂದ ಅಹ್ಮದಾಬಾದ್ ನ ರಸ್ತೆ ಬದಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧ

ಅಹ್ಮದಾಬಾದ್ : ಅಹ್ಮದಾಬಾದ್ ನಲ್ಲಿ ಇಂದಿನಿಂದ (ಮಂಗಳವಾರ) ರಸ್ತೆ ಬದಿಗಳ ಅಂಗಡಿಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ.


ಅಹ್ಮದಾಬಾದ್ ಮಹಾನಗರ ಪಾಲಿಕೆ ಈ ಸಂಬಂಧ ಆದೇಶ ಹೊರಡಿಸಿದ್ದು, ಮಂಗಳವಾರದಿಂದ ಈ ನಿಯಮ ಜಾರಿಗೆ ಬಂದಿದೆ.


“ಸಾರ್ವಜನಿಕ ರಸ್ತೆಗಳಲ್ಲಿ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ಅವಕಾಶ ನೀಡದಿರಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ಪಟ್ಟಣ ಯೋಜನಾ ಸಮಿತಿ ನಿರ್ಧರಿಸಿದೆ. ಈ ನೀತಿ ಇಂದಿನಿಂದ ಜಾರಿಗೆ ಬಂದಿದೆ ಎಂದು ಸಮಿತಿ ತಿಳಿಸಿದೆ.

Join Whatsapp
Exit mobile version