ಬೆಂಗಳೂರು: ಹಿಜಾಬ್ ಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಬೆಂಗಳೂರಿನಾದ್ಯಂತ ಬಲೂನ್ ಅಭಿಯಾನ ನಡೆಸಲಾಗುತ್ತಿದೆ.
ನಗರದ ಹಲವೆಡೆ ಬಲೂನ್ ಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲಾಗಿದೆ. ಶಿಕ್ಷಣದ ಮೇಲೆ ಧರ್ಮದ ಬಣ್ಣ ಬೇಡ, ನಾವೆಲ್ಲಾ ಒಂದೇ, ಧಾರ್ಮಿಕ ಹಕ್ಕನ್ನು ಗೌರವಿಸಿ, ಮುಂತಾದ ಬರಹಗಳುಳ್ಳ ಕೆಂಪು ಬಣ್ಣದ ಬಲೂನ್ ಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಕೆಲವೆಡೆ ಬಿತ್ತ ಪತ್ರಗಳನ್ನು ಅಳವಡಿಸಿ ಹಿಜಾಬ್ ಗೆ ಬೆಂಬಲ ಸೂಚಿಸಲಾಗಿದೆ.