ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ 9ನೇ ಘಟಿಕೋತ್ಸವ ಮಂಗಳವಾರ ಬೆಳಿಗ್ಗೆ ವಿವಿಯ ಆವರಣದಲ್ಲಿ ನಡೆಯಲಿದ್ದು. ಇದರಲ್ಲಿ ವಿವಿಯಿಂದ ಈ ವರ್ಷ ಉದ್ಯಮಿ, ಸಮಾಜಸೇವಕರಾದ ನರೇಂದ್ರ ಬಲ್ದೋಟ, ಸಾಹಿತಿ ಹಿರೆಮಗಳೂರು ಕಣ್ಣನ್ ಹಾಗು ನ್ಯಾಯವಾದಿ ಎನ್ ತಿಪ್ಪಣ್ಣ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆಂದು ವಿವಿಯ ಕುಲಪತಿ ಡಾ. ಸಿದ್ದು ಪಿ ಅಲಗೂರು ಅವರು ಇಂದು ಪ್ರಕಟಿಸಿದ್ದಾರೆ.
ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಕುರುಕ್ಷೇತ್ರ ವಿವಿಯ ವಿಶ್ರಾಂತ ಕುಲಪತಿ ಡಾ.ಕೈಲಾಶ್ ಚಂದ್ರಶರ್ಮ ಘಟಿಕೋತ್ಸವ ಭಾಷಣ ಮಾಡಲಿದ್ದಾರೆಂದು ತಿಳಿಸಿದ್ದಾರೆ.
ಕಲಾವಿದ ಬಸಲಿಂಗಯ್ಯ ಹಿರೇಮಠ. ನರೇಂದ್ರಕುಮಾರ್, ಎನ್.ತಿಪ್ಪಣ್ಣ, ವೈದ್ಯಕೀಯ ಸೇವೆ ಮಲ್ಲಿಕಾರ್ಜುನ ವಿ.ಜಾಲಿ, ಸಾವಯುವ ಕೃಷಿ ಎಸ್.ಸಿ. ವೀರಭದ್ರಪ್ಪ ಅವರು ಅರ್ಜಿ ಗೌರವ ಡಾಕ್ಟರೇಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. 42 ವಿದ್ಯಾರ್ಥಿಗಳು 51 ಚಿನ್ನದ ಪದಕ ಪಡೆಯಲಿದ್ದಾರೆ. 26 ವಿದ್ಯಾರ್ಥಿಗಳು ಪಿಹೆಚ್ ಡಿ ಪದವಿ ಪಡೆಯಲಿದ್ದಾರೆ. ಅಲ್ಲದೆ ಪದವಿಯಲ್ಲಿ 11 ಸಾವಿರದ 828 ವಿದ್ಯಾರ್ಥಿಗಳಿಗೆ , ಸ್ನಾತಕೋತ್ತರ. ಪದವಿಯಲ್ಲಿ 2060 ವಿದ್ಯಾರ್ಥಿಗಳಿಗೆ ಪದವಿ ನೀಡಲಿದೆ ಎಂದು ತಿಳಿಸಿದರು.