Home ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಫಿಲೀಯೇಶನ್ ರದ್ದು: ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ಮಾನ್ಯತೆ ನೀಡುವಂತೆ ಬಿಎಐಗೆ...

ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಫಿಲೀಯೇಶನ್ ರದ್ದು: ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ಮಾನ್ಯತೆ ನೀಡುವಂತೆ ಬಿಎಐಗೆ ಮನವಿ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಪಿಲೀಯೇಶನ್ ಅನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ರದ್ದುಪಡಿಸಿದೆ. ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ  ಉಡುಪಿ ಶಾಸಕ ರಘಪತಿ ಭಟ್ ತಿಳಿಸಿದರು

ಬೆಂಗಳೂರಿನಲ್ಲಿಂದು ನಡೆದ  ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಬೆಂಗಳೂರು ಬ್ಯಾಡ್ಮಿಂಟನ್ ಕ್ಲಬ್ ಸದಸ್ಯರಿಗೆ ಮಾತ್ರ ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದ ಲಾಭ ದೊರೆತಿದ್ದು. ಜಿಲ್ಲಾ ಬ್ಯಾಡ್ಮಿಂಟನ್ ಸಂಘಕ್ಕೆ ಯಾವುದೇ ಲಾಭ ದೊರೆಯುತ್ತಿರಲಿಲ್ಲ. ಜತೆಗೆ ಈಗಿರುವ ಬ್ಯಾಡ್ಮಿಂಟನ್ ಆಪ್ ಇಂಡಿಯಾದ ಬೈಲಾ ಹಾಗೂ ಕೇಂದ್ರ ಸರ್ಕಾರದ ನೀತಿಗೆ ವಿರುದ್ಧವಾಗಿರುವುದರಿಂದ ಈ ಅಫಿಲಿಯೇಶನ್ ರದ್ದು ಪಡಿಸಿದೆ ಎಂದು ತಿಳಿಸಿದರು.

ಈ ಕುರಿತಂತೆ ಸೂಕ್ತ ದಾಖಲೆಗಳನ್ನು ಸಿದ್ದಪಡಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಗಮನ ಸಳೆಯಲಾಯಿತು. ಮುಖ್ಯಮಂತ್ರಿಗಳ ಸೂಚನೆಯಂತೆ ಕ್ರೀಡಾ ಇಲಾಖೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ  ಹೆಚ್ಚುವರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಇದಕ್ಕೆ ಸಂಬಂಧಿಸಿದ ಪೂರಕವಾದ ಸೂಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ಇವರಿಗೆ ಸಲ್ಲಿಸಿದ್ದರು ಅದರಂತೆ ಬ್ಯಾಡ್ಮಿಂಟನ್ ಆಪ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಶಾಸಕ ರಘಪತಿ ಭಟ್ ನೇತೃತ್ವದ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗಳ ತಂಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ರಾಷ್ಟ್ರಾಧ್ಯಕ್ಷ ರಾದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಬೇಟಿಯಾಗಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ನ್ಯೂ ನತೆಗಳ ಬಗ್ಗೆ ಮನವರಿಕೆ ಮಾಡಿದ್ದು.  ಇವರ ದಾಖಲೆಯನ್ನು ಪರಿಶೀಲಿಸಿ ಅಫಿಲೀಯೇಶನ್ ರದ್ದು ಪಡಿಸಿದೆ ಎಂದರು.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ 2500 ಮಂದಿ ಅಜೀವ ಸದಸ್ಯರಿದ್ದು. ಎಲ್ಲ ಜಿಲ್ಲೆಗಳಿಂದ 21ಮಂದಿ ಸದಸ್ಯರನ್ನು ಹೊಂದಲಾಗಿದೆ. ಬ್ಯಾಡ್ಮಿಂಟನ್  ಅಸೋಸಿಯೇಷನ್ ಕ್ಲಬ್ ನಲ್ಲಿ ಆಟಗಾರರಲ್ಲದವರು ಇದರ ಸದಸ್ಯ ರಾಗಿದ್ದು ಇದು ಬಿಎಐ ಬೈಲಾಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಬೈಲಾ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಫಿಲೀಯೇಶನ್ ರದ್ದು ಆಗಿದ್ದು. ಈ ಹಿನ್ನಲೆಯಲ್ಲಿ ಶಾಸಕ ರಘಪತಿ ಭಟ್ ನೇತೃತ್ವದ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ಮಾನ್ಯತೆ ನೀಡುವಂತೆ ಬಿಎಐ ಗೆ ಮನವಿ ಮಾಡುವ ಕುರಿತು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Join Whatsapp
Exit mobile version