Home ಟಾಪ್ ಸುದ್ದಿಗಳು ಬಾಬಾ ಸಿದ್ದೀಕಿ, ಅವರ ಮಗ ಜೀಶನ್ ಇಬ್ಬರೂ ನಮ್ಮ ಗುರಿಯಾಗಿದ್ದರು: ಆರೋಪಿಗಳ ಹೇಳಿಕೆ

ಬಾಬಾ ಸಿದ್ದೀಕಿ, ಅವರ ಮಗ ಜೀಶನ್ ಇಬ್ಬರೂ ನಮ್ಮ ಗುರಿಯಾಗಿದ್ದರು: ಆರೋಪಿಗಳ ಹೇಳಿಕೆ

ಮುಂಬೈ: ಹತ್ಯೆಯಾದ ಮಾಜಿ ಸಚಿವ ಬಾಬಾ ಸಿದ್ದೀಕಿ ಹಾಗೂ ಅವರ ಪುತ್ರ, ಕಾಂಗ್ರೆಸ್ ಶಾಸಕ ಜೀಶನ್ ಅವರಿಗೆ ಕೆಲವು ದಿನಗಳ ಹಿಂದೆಯೇ ಬೆದರಿಕೆ ಇತ್ತು ಎಂದು ‘ಎಎನ್ ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.


‘ಜೀಶನ್ ಹಾಗೂ ಬಾಬಾ ಇಬ್ಬರೂ ನಮ್ಮ ಗುರಿಯಾಗಿದ್ದರು. ಇಬ್ಬರಲ್ಲಿ ಯಾರೇ ಕಂಡರೂ ಗುಂಡು ಹಾರಿಸುವಂತೆ ಆದೇಶವಿತ್ತು’ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಉಲ್ಲೇಖಿಸಿದೆ.


ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಸಿದ್ದೀಕಿ ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಜೀಶನ್ ಅವರ ಕಚೇರಿಯಿಂದ ಹೊರಗೆ ಬಂದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.


ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಪ್ರವೀಣ್ ಲೋಂಕರ್ (28) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Join Whatsapp
Exit mobile version