Home ಟಾಪ್ ಸುದ್ದಿಗಳು ಅಯೋಧ್ಯೆ ಮಸೀದಿಗೆ ನೀಡಿದ್ದ ಜಮೀನು ನಮ್ಮದು ಎಂದಿದ್ದ ಸಹೋದರಿಯರ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಅಯೋಧ್ಯೆ ಮಸೀದಿಗೆ ನೀಡಿದ್ದ ಜಮೀನು ನಮ್ಮದು ಎಂದಿದ್ದ ಸಹೋದರಿಯರ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಲಖನೌ : ಅಯೋದ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಭೂಮಿ ನಮ್ಮದು ಎಂದು ದೆಹಲಿ ಮೂಲದ ಇಬ್ಬರು ಸಹೋದರಿಯರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಅಯೋಧ್ಯೆಯಲ್ಲಿ ನೂತನ ಮಸೀದಿ ನಿರ್ಮಿಸಲು ಸರಕಾರ ಐದು ಎಕರೆ ಜಮೀನು ನೀಡಿತ್ತು. ಆದರೆ, ಈ ಜಮೀನು ತಮ್ಮದು ಎಂದು ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಚಾ, ರಮಾರಾಣಿ ಪಂಜಾಬಿ ಎಂಬವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿಯ ವಿಚಾರಣೆ ವೇಳೆ ಉತ್ತರ ಪ್ರದೇಶ ಸರಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಮೇಶ್ ಕುಮಾರ್ ಸಿಂಗ್ ಅವರು ಸಹೋದರಿಯರ ಮನವಿಯನ್ನು ವಿರೋಧಿಸಿದರು. ಮಸೀದಿಗೆ ನಿಗದಿ ಪಡಿಸಿದ ಭೂ ನಿವೇಶನದ ಸಂಖ್ಯೆ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಿದ ಸಂಖ್ಯೆಗಳು ಭಿನ್ನವಾಗಿವೆ ಎಂದು ಅವರು ಹೇಳಿದರು.

ತಮ್ಮ ಅರ್ಜಿ ಹಿಂಪಡೆಯುವುದಾಗಿ, ಅರ್ಜಿದಾರರ ಪರ ವಕೀಲರು ತಿಳಿಸಿದ ಬಳಿಕ, ನ್ಯಾ. ಡಿ.ಕೆ. ಉಪಾಧ್ಯಾಯ ಮತ್ತು ನ್ಯಾ. ಮನೀಶ್ ಕುಮಾರ್ ಈ ಅರ್ಜಿಯವನ್ನು ವಜಾಗೊಳಿಸಿದರು.

Join Whatsapp
Exit mobile version