Home ರಾಜ್ಯ ಎನ್ ಎಫ್ ಐ ಎ ಎ ನಿಂದ ರಕ್ತದಾನಿಗಳಿಗೆ ಪ್ರಶಸ್ತಿ ಪ್ರದಾನ

ಎನ್ ಎಫ್ ಐ ಎ ಎ ನಿಂದ ರಕ್ತದಾನಿಗಳಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು: ರಾಷ್ಟ್ರೀಯ ಕಲಾವಿದರ ಮತ್ತು ಕ್ರಿಯಾಶೀಲ ಐಕ್ಯತಾ ವೇದಿಕೆ ಎನ್ ಐ ಎಫ್ ಎಎ ವತಿಯಿಂದ ಸಂವೇದನಾ ರಕ್ತದಾನ ಅಭಿಯಾನದಡಿ ರಕ್ತದಾನ ಮಾಡಿದವರಿಗೆ ಅಂತಾರಾಷ್ಟ್ರೀಯ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ಬ್ಲಡ್ ಡೊನೇಶನ್ ತಂಡ ಹಾಗೂ ಚಿಕ್ಕಬಳ್ಳಾಪುರ ತಂಡಗಳು ರಕ್ತದಾನ ಶಿಬಿರ ನಡೆಸಿ ಉತ್ತಮ ಪ್ರಶಸ್ತಿ ಪಡೆದ ಮುಂಚೂಣಿ ತಂಡಗಳಾಗಿದ್ದವು.

ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ, ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ನಿಫಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರ ನಡೆಸಿ ಒಂದು ಲಕ್ಷ ರಕ್ತ ಬಾಟಲ್ ಗಳನ್ನು ಸಂಗ್ರಹಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

 ರಾಜ್ಯದ ನಿಫಾ ಸಂಘಟನೆಯ ಅಧ್ಯಕ್ಷ ಡಾ ಭೂಸನೂರು ಮಠ ರಾಜಶೇಖರ್ ಮಾತನಾಡಿ, ನಿಫಾ ಸಂಘಟನೆ ವತಿಯಿಂದ ದೇಶ, ರಾಜ್ಯ ಸೇರಿದಂತೆ ಅನೇಕ ಕಡೆ ಒಂದು ಲಕ್ಷಕ್ಕೂ ಅಧಿಕ ಮಂದಿಯಿಂದ ರಕ್ತವನ್ನು ಸಂಗ್ರಹಿಸಲಾಗಿದೆ. ಇದೊಂದು ಉತ್ತಮ ಸಾಧನೆಯಾಗಿದೆ. ನಿಫಾ ವತಿಯಿಂದ ಕೂಡ ಕೋವಿಡ್ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ನಿಫಾದ ಅಧ್ಯಕ್ಷ ಪ್ರೀತ್ ಪಾಲ್ ಸಿಂಗ್ ಫನೂ ಮಾತನಾಡಿ, ನಿಫಾ ವತಿಯಿಂದ ಇಡೀ ದೇಶದಲ್ಲಿ ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಸಂಗ್ರಹಿಸಲಾಗಿದೆ. ರಕ್ತದಾನ ಶಿಬಿರದಲ್ಲಿ ಬಾಗಿಯಾಗಿ ರಕ್ತ ದಾನ ಮಾಡಿದವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಿಫಾ ಸಂವೇದನಾ ಸಂಯೋಜಿಕಿ ಡಾ.ಆಶ್ವಿನಿ ಎಸ್.ಶೆಟ್ಟಿ ಮಾತನಾಡಿ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ರಕ್ತದಾನ ಶಿಬಿರ ನಡೆಸಿ ರಕ್ತ ಸಂಗ್ರಹಿಸಿಲಾಗಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜನ ಸಾಮನ್ಯರಿಗೆ ನೆರವಾಗುವ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೇರಳದ ಎನ್ನೋಪಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸಂಯೋಜಕರಾಗಿದ್ದ ತಾವು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಸಚಿವ ಶಾಸಕ ಯು.ಟಿ.ಖಾದರ್, ರಾಷ್ಟ್ರೀಯ ಯುವ ಯೋಜನೆಯ ನಿರ್ದೇಶಕ ಡಾ.ಎಸ್. ಎನ್.  ಸುಬ್ಬರಾವ್, ನಿಫಾ ಕೇಂದ್ರ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version