Home ಟಾಪ್ ಸುದ್ದಿಗಳು ಆಸ್ಟ್ರೇಲಿಯಾ: ಹೋಟೆಲ್ ಮೇಲ್ಛಾವಣಿಗೆ ಅಪ್ಪಳಿಸಿದ ಹೆಲಿಕಾಪ್ಟರ್, ಪೈಲೆಟ್ ಸಾವು

ಆಸ್ಟ್ರೇಲಿಯಾ: ಹೋಟೆಲ್ ಮೇಲ್ಛಾವಣಿಗೆ ಅಪ್ಪಳಿಸಿದ ಹೆಲಿಕಾಪ್ಟರ್, ಪೈಲೆಟ್ ಸಾವು

ಸಿಡ್ನಿ: ಹೆಲಿಕಾಪ್ಟರ್ ವೊಂದು ಹೋಟೆಲ್ ನ ಮೇಲ್ಛಾವಣಿಗೆ ಅಪ್ಪಳಿಸಿದ್ದು, ಪೈಲಟ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸಿ ತಾಣವಾದ ಕೈರ್ನ್ಸ್ ನಲ್ಲಿ ನಡೆದಿದೆ.
ಹೋಟೆಲ್ ನ ನೂರಾರು ಅತಿಥಿಗಳನ್ನು ತೆರವುಗೊಳಿಸಲಾಗಿದೆ.


‘ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಡಬಲ್ ಎಂಜಿನ್ ಹೆಲಿಕಾಪ್ಟರ್ ಹೋಟೆಲ್ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೆಂಕಿ ಹೊತ್ತುಕೊಂಡಿದ್ದು, ತಕ್ಷಣ ಹೋಟೆಲ್ನಲ್ಲಿದ್ದ ನೂರಾರು ಅತಿಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ಕ್ವೀನ್ಸ್ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.


ಹೋಟೆಲ್ ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version