Home ಟಾಪ್ ಸುದ್ದಿಗಳು ಪರಿಸರವಾದಿ ಡಿ ವಿ ಗಿರೀಶ್ ಮೇಲೆ ಹಲ್ಲೆ: ದೂರು ದಾಖಲು

ಪರಿಸರವಾದಿ ಡಿ ವಿ ಗಿರೀಶ್ ಮೇಲೆ ಹಲ್ಲೆ: ದೂರು ದಾಖಲು

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ತಮ್ಮ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಪರಿಸರವಾದಿ ಡಿ.ವಿ.ಗಿರೀಶ್ ದೂರು ನೀಡಿದ್ದಾರೆ.


ಈ ಸಂಬಂಧ ಅವರು ಏಳು ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಜೀಪಿನಲ್ಲಿ ಬರುತ್ತಿದ್ದ ಸಂದರ್ಭ ತಮ್ಮೊಂದಿಗಿದ್ದ ಅಪ್ರಾಪ್ತ ಬಾಲಕಿಯನ್ನು ಕೆಲವರು ಚುಡಾಯಿಸಿದ್ದು, ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಡಿ .ವಿ. ಗಿರೀಶ್ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.


ಶ್ರೀಪಾಲ್ ಜೈನ್, ಜಬೀವುಲ್ಲಾ, ಕೀರ್ತಿಕುಮಾರ್, ಕೆ. ಪಿ ದಿನೇಶ್ ಹಾಗೂ ಅವರ ಪುತ್ರಿಯೊಂದಿಗೆ ತಾವು ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ತೊಟಕ್ಕೆ ಹೋಗಿದ್ದೆ. ಅಲ್ಲಿಂದ ಹಿಂದಿರುಗುತ್ತಿದ್ದ ಸಮಯದಲ್ಲಿ ಸಂಜೆ ಸುಮಾರು 5.30 ರ ವೇಳೆಗೆ ಸಂತವೇರಿ ಘಾಟ್ ಎರಡನೇ ತಿರುವಿನಲ್ಲಿ 8 ಜನ ಯುವಕರು 3 ಬೈಕ್ ನೊಂದಿಗೆ ಅಲ್ಲಿಗೆ ಬಂದಿದ್ದರು.


ತಮ್ಮ ಜೀಪು ಅಲ್ಲಿಗೆ ಬರುತ್ತಿದ್ದಂತೆ ಜೀಪಿನಲ್ಲಿದ್ದ ಅಪ್ರಾಪ್ತ ಯುವತಿಯನ್ನು ನೋಡಿ ‘ಏ ಡಾರ್ಲಿಂಗ್ ‘ಎಂದು ಯುವಕರು ಕಿಚಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದು ಸ್ವಲ್ಪ ದೂರದಲ್ಲೇ ಇದ್ದ ತಮ್ಮ ಸ್ನೇಹಿತರು ಇದನ್ನು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತಾವು ಅಲ್ಲಿಂದ ಹೊರಟು ಚಿಕ್ಕಮಗಳೂರಿನತ್ತ ಬರುತ್ತಿದ್ದ ವೇಳೆ ಕಂಬಿಹಳ್ಳಿ ಬಳಿ ಅಡ್ಡಗಟ್ಟಿ ತಮ್ಮನ್ನು ಏಕಾಏಕಿ ಥಳಿಸಿದ್ದಾರೆ ಅಲ್ಲದೆ ಕಲ್ಲು ತೂರಾಟವನ್ನು ಮಾಡಿದ್ದಾರೆ ಎಂದು ಎಂದು ದೂರಿನಲ್ಲಿ ಗಿರೀಶ್ ತಿಳಿಸಿದ್ದಾರೆ

Join Whatsapp
Exit mobile version