Home ಕರಾವಳಿ ಬಿಬಿಸಿ ಮೇಲಿನ ದಾಳಿ ಕೇಂದ್ರ ಸರಕಾರದ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ: ರಿಯಾಝ್ ಫರಂಗಿಪೇಟೆ

ಬಿಬಿಸಿ ಮೇಲಿನ ದಾಳಿ ಕೇಂದ್ರ ಸರಕಾರದ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ: ರಿಯಾಝ್ ಫರಂಗಿಪೇಟೆ

ಮಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದಾಗಿನಿಂದ ಪತ್ರಿಕಾ ಸ್ವಾತಂತ್ರ್ಯವು ದಮನಿಸಲ್ಪಡುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಬಿಬಿಸಿ ಮೇಲಿನ ಐಟಿ ದಾಳಿ ನಡೆದಿದೆ ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅಭಿಪ್ರಾಯ ಪಟ್ಟಿದ್ದಾರೆ.


ಮೋದಿ ಸರಕಾರದಲ್ಲಿ ಪ್ರಗತಿಪರರು, ಚಿಂತಕರು ಹಾಗೂ ಹೋರಾಟಗಾರರು ಎಂದಿಗೂ ಸುರಕ್ಷಿತರಲ್ಲ. ಯಾರು ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಾರೋ ಅವರೆಲ್ಲರನ್ನೂ ಕಠಿಣ ಕಾನೂನುಗಳನ್ನು ದುರ್ಬಳಕೆ ಮಾಡಿ ಜೈಲು ಸೇರುವಂತೆ ಮಾಡಿಕೊಳ್ಳಲಾಗುತ್ತಿದ್ದು, ಇದು ಸರ್ವಾಧಿಕಾರದ ಮನೋಸ್ಥಿತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.


ಹಿಂದೆಯೂ ಹಲವು ನಿರ್ಭೀತ ಪತ್ರಿಕಾ ಸಂಸ್ಥೆಗಳಿಗೆ ಸರ್ಕಾರಿ ಪ್ರಾಯೋಜಿತ ದಾಳಿಗಳಾಗಿದ್ದು, ಇದೀಗ ನಡೆದಿರುವ ಬಿಬಿಸಿ ಮೇಲಿನ ದಾಳಿಯು ಅಪಾಯಕಾರಿಯಾಗಿದ್ದು, ಪತ್ರಿಕಾ ಸಂಸ್ಥೆಗಳನ್ನು ಹಾಗೂ ಪತ್ರಕರ್ತರನ್ನು ಬೆದರಿಸಿ ಬಾಯಿ ಮುಚ್ಚಿಸುವ ತಂತ್ರವಾಗಿದೆ ಎಂದು ಹೇಳಿದರು.


ಇಂತಹ ಸರ್ವಾಧಿಕಾರದ ಧೋರಣೆಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಖಂಡಿಸಬೇಕಾಗಿದ್ದು ಇಲ್ಲದಿದ್ದಲ್ಲಿ, ಇಂತಹ ಮನೋಸ್ಥಿತಿಯು ಮುಂದುವರಿಯುವ ಸಾಧ್ಯತೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version