Home ಟಾಪ್ ಸುದ್ದಿಗಳು ಮಾನಸಿಕ ವ್ಯಕ್ತಿಯಿಂದ ಭೀಕರ ದಾಳಿ: ಪೋಲಿಸ್ ಇನ್ಸ್ ಪೆಕ್ಟರ್ ಸೇರಿ ಐವರ ಹತ್ಯೆ !

ಮಾನಸಿಕ ವ್ಯಕ್ತಿಯಿಂದ ಭೀಕರ ದಾಳಿ: ಪೋಲಿಸ್ ಇನ್ಸ್ ಪೆಕ್ಟರ್ ಸೇರಿ ಐವರ ಹತ್ಯೆ !

ಅಗರ್ತಲ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕಬ್ಬಿಣದ ರಾಡ್ ನಿಂದ ದಾಳಿ ನಡೆಸಿ ಓರ್ವ ಪೋಲಿಸ್ ಇನ್ಸ್ಪೆಕ್ಟರ್ ಸೇರಿದಂತೆ ಐದು ಮಂದಿಯನ್ನು ಹತ್ಯೆ ಮಾಡಿದ ದಾರುಣ ಘಟನೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.


ಪ್ರದೀಪ್ ದೆಬ್ರಾಯ್ ಇದ್ದಕ್ಕಿದ್ದಂತೆ ತನ್ನ ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು ಮತ್ತು ತಮ್ಮನ ಮೇಲೆ ದಾಳಿ ನಡೆಸಿ ಕೊಂದಿದ್ದು, ತನ್ನ ಪತ್ನಿಯನ್ನೂ ಗಂಭೀರವಾಗಿ ಗಾಯಗೊಳಿಸಿದ್ದಾನೆ. ರಸ್ತೆಯಲ್ಲಿ ಬರುತ್ತಿದ್ದ ಆಟೋರಿಕ್ಷಾವೊಂದನ್ನು ತಡೆದು ನಿಲ್ಲಿಸಿ ಅದರ ಚಾಲಕನನ್ನು ಕೊಂದಿದ್ದಲ್ಲದೇ ಆತನ ಮಗನನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇನ್ಸ್ ಪೆಕ್ಟರ್ ಸತ್ಯಜಿತ್ ಮಲ್ಲಿಕ್ ನೇತೃತ್ವದ ತಂಡ ತನಿಖೆ ನಡೆಸಲು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಅವರ ಮೇಲೂ ದಾಳಿ ನಡೆಸಿ ಇನ್ಸ್ ಪೆಕ್ಟರನ್ನು ಕೊಂದಿದ್ದಾನೆ ಎಂದು ಎಎಸ್ಐ ರಾಜಿಬ್ ಸೇನ್ ಗುಪ್ತಾ ತಿಳಿಸಿದ್ದಾರೆ.


ಘಟನೆಯಲ್ಲಿ ಇನ್ನಿಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಆರೋಪಿ ಪ್ರದೀಪ್ ದೆಬ್ರಾಯ್ ನನ್ನು ಬಂಧಿಸಿದ್ದಾರೆ.

Join Whatsapp
Exit mobile version