Home ಟಾಪ್ ಸುದ್ದಿಗಳು ಮದುವೆಯಾಗುವುದಾಗಿ ನಂಬಿಸಿ ಮೋಸ| ಕಲಬುರಗಿ ಪಾಲಿಕೆ ಆಯುಕ್ತ ವಿರುದ್ಧ ಯುವತಿ ದೂರು

ಮದುವೆಯಾಗುವುದಾಗಿ ನಂಬಿಸಿ ಮೋಸ| ಕಲಬುರಗಿ ಪಾಲಿಕೆ ಆಯುಕ್ತ ವಿರುದ್ಧ ಯುವತಿ ದೂರು

ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಯುವತಿಯೊಬ್ಬಳು ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಕಲಬುರಗಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾಳೆ.

ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಮೂಲಕ ಯುವತಿ ನೀಡಿರುವ ದೂರು ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ವಾರದ ಹಿಂದೆಯೇ ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾರನ್ನು ಭೇಟಿ ಮಾಡಿ ತಾನು ಅಳಲು ತೋಡಿಕೊಂಡಿದ್ದೇನೆ. ಆದರೆ ಯಾರೂ ಸ್ಪಂದಿಸಿಲ್ಲ. ಯಾರನ್ನು ಭೇಟಿಯಾದರೂ ನನಗೆ ನ್ಯಾಯ ಸಿಕ್ಕಿಲ್ಲ. ಎಲ್ಲರೂ ರಾಜಿ ಮಾಡಿಕೊಳ್ಳಲು ಹೇಳಿದ್ದಾರೆ ಎಂದು ಯುವತಿ ಟ್ವೀಟ್ ಮಾಡಿದ್ದಾರೆ.

ಯುವತಿಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಸ್ನೇಹಲ್ ಲೋಖಂಡೆ, “ನನ್ನ ವಿರುದ್ಧ ಆರೋಪಿಸಿರುವ ಯುವತಿ ಯಾರೆಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೂ ನಾನು ದೂರು ನೀಡಿದ್ದೇನೆ. ನನ್ನ ಹೆಸರು ಕೆಡಿಸುವುದಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ. ಆ ಯುವತಿ ಜತೆ ನಾನು ಯಾವುದೇ ಚಾಟಿಂಗ್ ಮಾಡಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ವಾಟ್ಸಾಪ್ ಚಾಟಿಂಗ್ ಬಗ್ಗೆಯೂ ನನಗೆ ಗೊತ್ತಿಲ್ಲ. ಆ ಫೋಟೊಗಳು ಎಲ್ಲಿಂದ ತೆಗೆದುಕೊಂಡರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Join Whatsapp
Exit mobile version