Home ಟಾಪ್ ಸುದ್ದಿಗಳು ರಾಜೀನಾಮೆಯಿಂದ ತೆರವಾಗಿರುವ ದೆಹಲಿ ಸಚಿವ ಸಂಪುಟ ಸ್ಥಾನಕ್ಕೆ ಅತಿಶಿ, ಸೌರಭ್ ಭಾರದ್ವಾಜ್ ಹೆಸರು ಶಿಫಾರಸು

ರಾಜೀನಾಮೆಯಿಂದ ತೆರವಾಗಿರುವ ದೆಹಲಿ ಸಚಿವ ಸಂಪುಟ ಸ್ಥಾನಕ್ಕೆ ಅತಿಶಿ, ಸೌರಭ್ ಭಾರದ್ವಾಜ್ ಹೆಸರು ಶಿಫಾರಸು

ನವದೆಹಲಿ: ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆಯಿಂದ ತೆರವಾಗಿದ್ದ ದೆಹಲಿ ಸಚಿವ ಸಂಪುಟದ ಎರಡು ಸ್ಥಾನಗಳಿಗೆ ಎಎಪಿ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಸೂಚಿಸಲಾಗಿದೆ.


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರನ್ನು ಸಂಪುಟ ಸಚಿವ ಸ್ಥಾನಕ್ಕೆ ಸೂಚಿಸಿ ದೆಹಲಿ ಎಲ್-ಜಿ ವಿ ಕೆ ಸಕ್ಸೇನಾ ಅವರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.


ಹೊಸದಾಗಿ ಸೇರ್ಪಡೆಗೊಂಡ ಸಚಿವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ 48 ಗಂಟೆಗಳಲ್ಲಿ ನಡೆಯುವ ಸಾಧ್ಯತೆ ಇದೆ.

Join Whatsapp
Exit mobile version