Home ಕರಾವಳಿ ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ, ಪದವಿ ಪ್ರದಾನ

ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ, ಪದವಿ ಪ್ರದಾನ

ಮಂಗಳೂರು: ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗಿವಹಿಸಿ ಮಾತನಾಡಿದ ಖ್ಯಾತ ವಿದ್ವಾಂಸ ‘ಅಬ್ದುಲ್ ಖದೀರ್ ಉಮರಿ’ ಶಿಕ್ಷಣದ ಪ್ರಭೆ ಹರಡುವ ಮುಖ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕಲ್ಪಿಸುತ್ತಿರುವ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಮಕ್ಕಳಿಗೆ ಇಸ್ಲಾಮಿನ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡುತ್ತಿರುವ ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಯು ಚಿರಾಯುಗವಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಮೀಯತೇ ಅಹ್ಲೆ-ಹದೀಸ್ ಕರ್ನಾಟಕ – ಗೋವ ಇದರ ಪ್ರದಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಅಸ್ಲಮ್ ಖಾನ್ ವಹಿಸಿದ್ದರು. ಶೇಖ್ ಅಬ್ದುಲ್ ವಾರಿಸ್ ಮದನಿ-ಶಿರೂರು, ಶೇಖ್ ಶಕೀಬುರ್ರಹಮಾನ್ ಸಲಫಿ-ಶಿರೂರು, ಜನಾಬ್ ಅಬ್ದುರ್ರಝಾಕ್ ಹಾಜಿ-ಮಂಗಳೂರು, ಮುಹಮ್ಮದ್ ಮನ್ಸೂರ್ – HNGC ಸುರತ್ಕಲ್, ಮುಹಮ್ಮದ್  ನದೀಮ್ ಪ್ರಾಂಶುಪಾಲರು ಕೋಸ್ಮೋಸ್ ಟ್ಯುಟೋರಿಯಲ್ ಮಂಗಳೂರು ಜನಾಬ್ ಕೆ.ಪಿ.ಮೊಯಿದಿನಬ್ಬ, ಸಲಹಾ ಸಮಿತಿ ಸದಸ್ಯರು, ಜಮೀಯತೆ ಅಹ್ಲೆ-ಹದೀಸ್ ದ.ಕ ಜಿಲ್ಲೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ “ಅಸ್ಸಿರಾತುಲ್ ಮುಸ್ತಖೀಮ್ ಶರಿಯಾ ಕಾಲೇಜ್” ಇದರ 13 ವಿದ್ಯಾರ್ಥಿನಿಯರಿಗೆ ‘ಮುಸ್ತಖೀಮಿ’ ಪದವಿಯನ್ನು ಮತ್ತು ಅಬ್ದುಲ್ಲಾ ಇಬ್ನ್ ಮಸೂದ್ ಕುರ್ ಆನ್ ಹಿಫ್ಲ್ ಕಾಲೇಜ್ ಇದರಲ್ಲಿ ಕುರ್ ಆನ್ ಕಂಠಪಾಠ ಮಾಡಿದ 3 ವಿದ್ಯಾರ್ಥಿನಿಯರಿಗೆ ‘ಕುರ್ ಆನ್ ಹಾಫಿಝಾ’ ಪದವಿಯನ್ನು ವಿತರಿಸಲಾಯಿತು.

ಅಶ್ರಫ್ ಸಲಫಿ ಸ್ವಾಗತ ಭಾಷಣವನ್ನು ಮಾಡಿದರು. ಹಾಫಿಝ್ ಮುಹಮ್ಮದ್ ಯಾಸೀನ್ ವರದಿ ವಾಚನ ಮಾಡಿದರು ಮತ್ತು ಅಬ್ದುಲ್ ಸ್ಸಲಾಮ್ ಕಾಟಿಪಳ್ಳ ಇವರು ಕಾರ್ಯಕ್ರಮ ನಿರೂಪಿಸಿದರು.  ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಕಾರ್ಯಕ್ರಮ ಜರಗಿತು.

Join Whatsapp
Exit mobile version