ವಕ್ಫ್ ತಿದ್ದುಪಡಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

- Advertisement -

ಇಂತಹ ಧಿಟ್ಟ ನಿರ್ಧಾರಗಳಿಗೆ ಕೈಜೋಡಿಸಲು ನಾವು ಸದಾ ಸಿದ್ದ: ಅಬ್ದುಲ್ ಮಜೀದ್

- Advertisement -


ಬೆಂಗಳೂರು: ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ತಂದಿತ್ತು. ಇದಕ್ಕೆ ಟಕ್ಕರ್ ಕೊಡಲೇ ಬೇಕು ಅಂತಾ ಸಜ್ಜಾಗಿದ್ದ ಕರ್ನಾಟಕ ಸರ್ಕಾರ, ನಿನ್ನೆ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಾಪಸಾತಿಗೆ ಆಗ್ರಹಿಸಿ ನಿರ್ಣಯ ಮಂಡನೆ ಮಾಡಿದೆ.


ಬಿಜೆಪಿ ಶಾಸಕರ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ. ನಿನ್ನೆ ವಿಧಾಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ನಿರ್ಣಯವನ್ನ ಮಂಡಿಸಿದ್ದಾರೆ.

- Advertisement -

ವಕ್ಫ್ ತಿದ್ದುಪಡಿ ಮಸೂದೆ ಏಕಪಕ್ಷೀಯವಾಗಿದೆ. ಜಂಟಿ ಸದನ ಸಮಿತಿ ಕೇಂದ್ರಕ್ಕೆ ಏಕಪಕ್ಷೀಯವಾಗಿ ಶಿಫಾರಸುಗಳನ್ನ ಸಲ್ಲಿಸಿದೆ. ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಮೂಲಭೂತ ಹಕ್ಕನ್ನ ಉಲ್ಲಂಘಿಸಿದೆ. ಕೇಂದ್ರ ಈ ವಿಧೇಯಕದ ಮೂಲಕ ರಾಜ್ಯ ಸರ್ಕಾರದ ಸ್ವಾಯತ್ತತೆಯನ್ನ ಹತ್ತಿಕ್ಕಲು ಹೊರಟಿದೆ. ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕೆಂದು ನಿರ್ಣಯ ಕೈಗೊಂಡಿರುತ್ತೆ. ಕರ್ನಾಟಕ ಸರ್ಕಾರ ಸರ್ವಾನುಮತದಿಂದ ಸದನದಲ್ಲಿ ನಿರ್ಣಯ ಕೈಗೊಂಡಿರುತ್ತದೆ ಎಂದು ಹೆಚ್.ಕೆ ಪಾಟೀಲ್ ಹೇಳಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಇಂದು ವಿಧಾನಸಭೆಯಲ್ಲಿ ಮೋದಿ ನೇತೃತ್ವದ ಕೋಮುವಾದಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಸಂವಿಧಾನ ವಿರೋಧಿ,” ವಕ್ಫ್ ತಿದ್ದುಪಡಿ ಮಸೂದೆ” ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಮತ್ತು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನ ಜನವಿರೋಧಿ ನೀತಿಗಳ ವಿರುದ್ಧ ಇಂತಹ ದಿಟ್ಟ ನಿಲುವುಗಳಿಗೆ ನಮ್ಮ ಪಕ್ಷ ಸದಾ ಸರ್ಕಾರದ ಜೊತೆ ನಿಲ್ಲಲು ಸಿದ್ದವಿರುತ್ತದೆ ಎಂದರು.


ವಖ್ಫ್ ಮಸೂದೆ ವಿರುದ್ಧ ನಿರ್ಣಯ ಕೈಗೊಳ್ಳುವಂತೆ,ಎಸ್ ಡಿಪಿಐ ಪಕ್ಷ ಕರ್ನಾಟಕ ಸರ್ಕಾರವನ್ನು ಈ ಹಿಂದೆಯೇ ಒತ್ತಾಯಿಸಿತ್ತು.
ಅದರಂತೆ ರಾಜ್ಯ ಸರ್ಕಾರ ಈ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಇದೇ ರೀತಿಯ ನಿರ್ಣಯಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲೂ ಕೈಗೊಳ್ಳುವ ಮೂಲಕ ಕೋಮುವಾದಿ ಬಿಜೆಪಿ ಪಕ್ಷದ ದ್ವೇಷ ರಾಜಕಾರಣವನ್ನು ಸೋಲಿಸಬೇಕು ಎಂದು ಈ ಮೂಲಕ ನಾನು ಬಿಜೆಪಿಯೇತರ ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳನ್ನು ವಿನಂತಿಸುತ್ತೇನೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -


Must Read

Related Articles