Home ಕರಾವಳಿ ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ SDTU

ವಿಧಾನಸಭಾ ಚುನಾವಣೆ: ಎಸ್‌ಡಿಪಿಐ ಗೆ ಬೆಂಬಲ ಘೋಷಿಸಿದ SDTU

ಮಂಗಳೂರು: 2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ ಈ ಚುನಾವಣೆಯಲ್ಲಿ ಕಾರ್ಮಿಕ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸುತ್ತದೆ ಎಂದು SDTU ರಾಜ್ಯಾಧ್ಯಕ್ಷ ಫಝಲುಲ್ಲಾ ರವರ ಅಧ್ಯಕ್ಷತೆಯಲ್ಲಿ ಏ.28 ರಂದು ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, SDTU ಕಾರ್ಮಿಕರ ಹಕ್ಕು ಮತ್ತು ಅವಕಾಶಗಳಿಗಾಗಿ ನಡೆಸುವ ಎಲ್ಲಾ ಪ್ರಜಾಸತ್ತಾತ್ಮಕ ಹೋರಾಟಗಳಿಗೆ SDPI ಬೆಂಬಲ ಸೂಚಿಸಿ ಸಹಕರಿಸಿವೆ. ಮಾತ್ರವಲ್ಲ ದುಡಿಯುವ ಮತ್ತು ದುರ್ಬಲ ವರ್ಗಗಳ ಮಧ್ಯೆ ಸಾಮಾಜಿಕ ಚಳುವಳಿಯ ಪ್ರಜ್ಞೆ ಹುಟ್ಟಿಸಿ ದೇಶದಾದ್ಯಂತ ಒಂದು ಆಂದೋಲನವಾಗಿ ಪಕ್ಷವೂ ರುಪುಗೊಂಡಿದೆ. ಕಾರ್ಮಿಕರು ಮತ್ತು ಅನ್ನದಾತ ರೈತ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಕಾರ್ಯನಿರ್ವಹಿಸುವ ಕ್ಯಾಡರ್ ಆಧಾರಿತ ಪಕ್ಷವಾಗಿದ್ದು, ಈ ನಿಟ್ಟಿನಲ್ಲಿ SDPI ಪಕ್ಷಕ್ಕೆ ಕಾರ್ಮಿಕರ ಪರ ಇರುವ ಬಲವಾದ ಗುರಿ SDTU ಸಂಘಟನೆಗಿರುವ ಗುರಿಯಲ್ಲಿ ಸಾಮಿಪ್ಯ ಇದೆ. ಹಾಗಾಗಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಮಟ್ಟದಲ್ಲಿ SDPI ಪಕ್ಷವನ್ನು ಬೆಂಬಲಿಸುತ್ತದೆ ನಮ್ಮ ಎಲ್ಲಾ ಯೂನಿಯನ್ ಸದಸ್ಯರು SDPI ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ SDTU ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪಾರ್ಲಿಯಾ, ಮಂಗಳೂರು ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, SDTU ಮಂಗಳೂರು ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆ ಉಪಸ್ಥಿತರಿದ್ದರು.

Join Whatsapp
Exit mobile version