ಮೂಡಿಗೆರೆ: ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಮ್ಮ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ನಯನಾಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಮೂಡಿಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ನಯನಾ ಮೋಟಮ್ಮ ಲಾಬಿ ನಡೆಸುತ್ತಿದ್ದಾರೆಂದು ಸ್ವಪಕ್ಷೀಯರೇ ದೂರುತ್ತಿದ್ದಾರೆ.
ಸೋಲುವ ಕ್ಯಾಂಡಿಡೇಟ್ ಗೆ ಯಾಕೆ ಟಿಕೇಟ್ ಕೊಡಬೇಕು. ಜನಾಭಿಪ್ರಾಯವೇ ಅವರ ವಿರುದ್ಧ ಇದೆ. ಪ್ರತೀ ಹೋಬಳಿಯಲ್ಲೂ ಅವರ ವಿರುದ್ಧ ನಾವು ಧ್ವನಿ ಎತ್ತಬೇಕು ಎಂದು ಸಭೆಯಲ್ಲಿ ಮುಖಂಡರೊಬ್ಬರು ಮಾಡಿರುವ ಭಾಷಣದ ವೀಡಿಯೋ ಫುಲ್ ವೈರಲ್ ಆಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಎಲ್ಲ ಪಕ್ಷಗಳಲ್ಲಿ ಹಲವಾರು ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಬಿರುಸಿನ ಪ್ರವಾಸ ಕೈಗೊಂಡಿದ್ದು, ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ಸಹ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.