Home ಕರಾವಳಿ ಮೂಡಬಿದ್ರೆ ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ: SDTU ಖಂಡನೆ, ಕಾನೂನು ಕ್ರಮಕ್ಕೆ ಆಗ್ರಹ

ಮೂಡಬಿದ್ರೆ ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ: SDTU ಖಂಡನೆ, ಕಾನೂನು ಕ್ರಮಕ್ಕೆ ಆಗ್ರಹ

ಮೂಡಬಿದ್ರೆ: ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕ ಮುಹಮ್ಮದ್ ಶೆರೀಫ್ ಎಂಬವರಿಗೆ ಮೂಡಬಿದ್ರೆ ನವಮಿ ವೃತ್ತದ ಬಳಿ ರಿಕ್ಷಾ ಪಾರ್ಕಿನ ಚಾಲಕರು ಸೇರಿ ಹಲ್ಲೆ ನಡೆಸಿದ್ದನ್ನು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಹಾರಿಸ್ ಮುಲ್ಕಿ ಖಂಡಿಸಿದ್ದಾರೆ.

ಕುಟುಂಬದ ನಿರ್ವಹಣೆಯನ್ನು ನಿಭಾಯಿಸಲು ವ್ಯವಸ್ಥೆಯಿಂದ ವಿವಿಧ ಆರ್ಥಿಕ ಅನನುಕೂಲತೆಯ ಸಂಕಷ್ಟಗಳನ್ನು ಎದುರಿಸಿ ರಿಕ್ಷಾ ಚಾಲಕರೆಲ್ಲರೂ ಗರಿಷ್ಠ ಶ್ರಮ ವಹಿಸಿ ದುಡಿಯುವ ಶ್ರಮಿಕ ವರ್ಗವಾಗಿದೆ ಚಾಲಕ ಸಮುದಾಯ. ಎಲ್ಲಾ ರಿಕ್ಷಾ ಚಾಲಕರು ಒಂದಲ್ಲ ಒಂದು ರೀತಿಯ ವಿವಿಧ ಸಂಕಷ್ಟಗಳನ್ನು ಎದುರಿಸಿ ನಮ್ಮಂತಯೇ ಸ್ವಾಭಿಮಾನದಿಂದ ದುಡಿಯುವವರಾಗಿದ್ದಾರೆ. ಆದರೆ ಕ್ಷುಲ್ಲಕ ಬಾಡಿಗೆ ವಿಚಾರದಲ್ಲಿ ಹಿರಿಯ ಚಾಲಕನೋರ್ವರಿಗೆ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸುವ ರಿಕ್ಷಾ ಚಾಲಕರ ಮನಸ್ಥಿತಿ ಅಘಾತ ಕಾರಿಯಾಗಿದೆ ಎಂದಿದ್ದಾರೆ.


ರಿಕ್ಷಾ ಚಲಾಕರ ಬಾಡಿಗೆ ವಿಚಾರದಲ್ಲಿ ವಿವಿಧ ಕಡೆ ವಿವಿಧ ಸಮಸ್ಯೆಗಳು ತಲೆದೋರುತ್ತಿದ್ದು ಕೆಲವೊಂದು ಸಲ ರಿಕ್ಷಾ ಪಾರ್ಕ್ ಎದುರಿನಿಂದಲೇ ಇನ್ನೊಂದು ರಿಕ್ಷಾ ಬಾಡಿಗೆ ಪಿಕ್ ಆಪ್ ಮಾಡುವುದರಿಂದ ಚಾಲಕರ ಮಧ್ಯೆ ಮಾತಿನ ಚಕಮುಕಿ ನಡೆದು ದೂರು ದಾಖಲಾಗುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇವೆ. ಆದರೆ ಬಾಡಿಗೆ ವಿಚಾರದಲ್ಲಿ ಈ ರೀತಿಯ ಹಲ್ಲೆ ನಡೆಸುವುದು ಮಾತ್ರ ರಿಕ್ಷಾ ಚಾಲಕರ ಸ್ವಾಭಿಮಾನದ ನೈತಿಕತೆಗೆ ವಿರುದ್ಧವಾಗಿದೆ. ಹಾಗಾಗಿ ರಿಕ್ಷಾ ಚಾಲಕರ ಬಾಡಿಗೆ ಇತ್ಯಾದಿ ವಿಚಾರಗಳ ಸಮಸ್ಯೆಗಳನ್ನು ಕಾನೂನು ಕೈಗೆತ್ತಿಕೊಳ್ಳುವ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಬದಲಾಗಿ ಯಾವುದೇ ಸಮಸ್ಯೆ ಇದ್ದರೂ ಮಾತುಕತೆಯ ಮೂಲಕ ಅಥವಾ ಪೊಲೀಸ್ ಇಲಾಖೆಯ ಮೂಲಕ ಪರಿಹರಿಸಲು ಪ್ರಯತ್ನಿಸುವುದರಿಂದ ಎಲ್ಲರಿಗೂ ಒಳಿತು ಇದೆ ಎಂದು ಹಾರಿಸ್ ಮೂಲ್ಕಿ ಹೇಳಿದ್ದಾರೆ.


ರಿಕ್ಷಾ ಚಾಲಕರಾಗಿ ದುಡಿಯುವವರನ್ನು ಹಿಂದಿರುಗಿ ಬರುವಿಕೆಗಾಗಿ ಕಾಯುತ್ತಿರುವ ಕುಟುಂಬಗಳು ಎಲ್ಲರಿಗೂ ಇದೆ ಎಂಬುವುದನ್ನು ಸಹುದ್ಯೋಗಿಗಳು ಅರ್ಥಮಾಡಬೇಕು. ಮಾತ್ರವಲ್ಲ, ಏಕಾಏಕಿ ಹಲ್ಲೆ ನಡೆಸುವ ಇಂತಹ ಮನಸ್ಥಿತಿಯ ರಿಕ್ಷಾ ಚಾಲಕರ ಈ ದುಷ್ಕ್ರತ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಘಟನೆಯ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹಾರಿಸ್ ಮುಲ್ಕಿ ಆಗ್ರಹಿಸಿದ್ದಾರೆ

Join Whatsapp
Exit mobile version