ಹಾಸನ: ಜಿಲ್ಲೆಯ ಅಸ್ಸಾಂ ಕೂಲಿ ಕಾರ್ಮಿಕರ ಬಾಡಿಗೆ ಮನೆಯೊಂದರಲ್ಲಿ ಮನೆಗಾಂಜಾ ಗಿಡಗಳು ಪತ್ತೆಯಾಗಿವೆ.
ಕಳೆದ ನಾಲ್ಕು ತಿಂಗಳ ಹಿಂದೆ ಅರಕಲೂಡು ತಾಲೂಕಿನ ವಿವಿಧ ಹಳ್ಳಿಗಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಕೂಲಿ ಕಾರ್ಮಿಕರು ಈ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಈ ಕಾರ್ಮಿಕರು ಕೂಲಿ ಕೆಲಸದ ಜೊತೆಗೆ ಗಾಂಜಾ ಬೆಳೆಯುತ್ತಿದ್ದರು ಎಂಬ ಮಾಹಿತಿಯು ತಿಳಿದು ಬಂದಿದ್ದು ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಅರಕಲಗೂಡು ಪೊಲೀಸರು ದಾಳಿ ನಡೆಸಿ, ನಾಲ್ಕೈದು ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಗುತ್ತಿಗೆ ಆಧಾರದ ಮೇಲೆ ಕರೆತಂದ ಗುತ್ತಿಗೆದಾರ ಪರಾರಿಯಾಗಿದ್ದಾನೆ