ಗುವಾಹಟಿ: ಕೋವಿಡೋತ್ತರ ಸಮಸ್ಯೆಗಳಿಂದ ಬಳಲುತ್ತಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೋಗೊಯ್ ಬಹು ಅಂಗಾಂಗ ವೈಫಲ್ಯದಿಂದಾಗಿ ಇಂದು ನಿಧನರಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೋಗೊಯ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, “ಅವರು ಜನಪ್ರಿಯ ನಾಕರಾಗಿದ್ದರು ಮತ್ತು ಪ್ರಮುಖ ಆಡಳಿತಗಾರನಾಗಿದ್ದರು” ಎಂದಿದ್ದಾರೆ.
ಆಗಸ್ಟ್ 25ರಂದು ಕೋವಿಡ್ ಪೊಸಿಟೀವ್ ವರದಿ ಬಂದ ಬಳಿಕ ಗೋಗೊಯ್ ರನ್ನು ಗುವಾಹಟಿ ವೈದ್ಯಕೀಯಾ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಬಳಿಕ ಅವರು ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ನವೆಂಬರ್ 2ರಂದು ಕೋವಿಡೋತ್ತರ ಸಮಸ್ಯೆಗಳ ಕಾರಣದಿಂದ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು.