Home ಟಾಪ್ ಸುದ್ದಿಗಳು  ‘ಬೆನ್ನಿಗೆ ಚೂರಿ ಇರಿದ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’: ಅಶೋಕ್ ಗೆಹ್ಲೋಟ್ ವಾಗ್ದಾಳಿ

 ‘ಬೆನ್ನಿಗೆ ಚೂರಿ ಇರಿದ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’: ಅಶೋಕ್ ಗೆಹ್ಲೋಟ್ ವಾಗ್ದಾಳಿ

ಪಾಲಿ (ರಾಜಸ್ಥಾನ): ‘ಬೆನ್ನಿಗೆ ಚೂರಿ ಇರಿದ ಸಚಿನ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬೆನ್ನಿಗೆ ಚೂರಿ ಇರಿದವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. 10 ಶಾಸಕರ ಬೆಂಬಲವೂ ಇಲ್ಲದ ಸಚಿನ್‌ ಪೈಲಟ್‌ ಅವರನ್ನು ಹೈಕಮಾಂಡ್‌ ಮುಖ್ಯಮಂತ್ರಿಯನ್ನಾಗಿ ಮಾಡಲು ಆಗುವುದಿಲ್ಲ. ಅವರು ಪಕ್ಷದ ವಿರುದ್ಧ ಬಂಡೆದ್ದು, ದ್ರೋಹ ಬಗೆದರು. ಅವರೊಬ್ಬ ಬೆನ್ನಿಗೆ ಚೂರಿ ಇರಿದವ’ ಎಂದು ಗೆಹ್ಲೋಟ್ ಕಿಡಿಕಾರಿದ್ದಾರೆ.

‘ಪಕ್ಷದ ಅಧ್ಯಕ್ಷರೊಬ್ಬರು ತಮ್ಮ ಪಕ್ಷದ ಸರ್ಕಾರವನ್ನೇ ಉರುಳಿಸಲು ಯತ್ನಿಸಿದ ಪ್ರಕರಣ ನಡೆದಿದ್ದು ಭಾರತದಲ್ಲಿ ಮೊದಲ ಬಾರಿ. 2020ರಲ್ಲಿ 19 ಶಾಸಕರೊಂದಿಗೆ ಸಚಿನ್‌ ಪೈಲಟ್‌ ಬಂಡಾಯ ಎದ್ದು, ದೆಹಲಿಯ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಆ ವೇಳೆ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಲ್ಲದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು. ಪೈಲಟ್ ಅವರ ಅಂದಿನ ಬಂಡಾಯಕ್ಕೆ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರು ಬೆಂಬಲ ನೀಡಿ,  ಹಣಕಾಸಿನ ನೆರವು ನೀಡಿದ್ದರು’ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

Join Whatsapp
Exit mobile version