Home ಟಾಪ್ ಸುದ್ದಿಗಳು ಯುವತಿಯರ ಫೋಟೊ ಮಾರ್ಫಿಂಗ್‌ ಮಾಡಿ ಹರಿಯಬಿಡುತ್ತಿದ್ದ ಬಾಲಕರಿಬ್ಬರ ಬಂಧನ

ಯುವತಿಯರ ಫೋಟೊ ಮಾರ್ಫಿಂಗ್‌ ಮಾಡಿ ಹರಿಯಬಿಡುತ್ತಿದ್ದ ಬಾಲಕರಿಬ್ಬರ ಬಂಧನ

ಬೆಂಗಳೂರು: ಯುವತಿಯರ ಫೋಟೊಗಳನ್ನು ಅಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದ ಇಬ್ಬರು ಬಾಲಕರು ಮತ್ತು ಓರ್ವ ಕಾಲೇಜು ವಿದ್ಯಾರ್ಥಿಯನ್ನು ಈಶಾನ್ಯ ವಿಭಾಗದ ಸೆನ್‌ ಠಾಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಲೇಜು ವಿದ್ಯಾರ್ಥಿ ಬಾಗಲೂರಿನ ನಿವಾಸಿಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಬಾಲಕರನ್ನು ಬಾಲ ನ್ಯಾಯಮಂಡಳಿಗೆ ಹಾಜರು ಪಡಿಸಲಾಗಿದೆ. ಮೂವರ ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಬಾಲಕಿಯರ, ತುವತಿಯರ ಇನ್‌ಸ್ಟಾಗ್ರಾಂ ಖಾತೆಯಿಂದ ಫೋಟೊ ತೆಗೆದು ಅದನ್ನು ಅಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುತ್ತಿದ್ದರು. ಅದಕ್ಕಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದರು ಎಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಬ್ಬ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವನು. ಉಳಿದಿಬ್ಬರು ಶಾಲೆಗಳಲ್ಲಿ ಕಲಿಯುವ ಬಾಲಕರು ಎಂದು ಪೊಲೀಸರು ಹೇಳಿದ್ದಾರೆ.

Join Whatsapp
Exit mobile version