ಬೆಂಗಳೂರು: ಮುಸ್ಲಿಮರು ಈ ದೇಶಕ್ಕೆ ನೀಡಿದ ಕೊಡುಗೆಗಳನ್ನು ನಾಶ ಮಾಡುವ ಆರೆಸ್ಸೆಸ್ ನ ಹುನ್ನಾರದ ಮುಂದುವರಿದ ಭಾಗವಾಗಿದೆ ಅಸ್ಸಾಂ ನ ಮರಿಯಾನಿ ಕ್ಷೇತ್ರದ BJP ಶಾಸಕ ರೂಪ್ ಜ್ಯೋತಿ ಕುರುಮಿ ಹೇಳಿಕೆ. ದೇಶದ ಸೌಂದರ್ಯಗಳಾದ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಬೇಕೆನ್ನುವ ವಿಕೃತ ಮನಸ್ಸಿನ ಶಾಸಕನನ್ನು ಬಂಧಿಸಿ ಜೈಲಿಗಟ್ಟಿದರೆ ದೇಶದಲ್ಲಿ ಸಾಮರಸ್ಯ ಉಳಿಯಬಹುದು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಸ್ಸಾಂ ನ ಮರಿಯಾನಿ ಕ್ಷೇತ್ರದ BJP ಶಾಸಕ ರೂಪ್ ಜ್ಯೋತಿ ಕುರುಮಿ ಅವರಂತಹ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಬಂಧಿಸಿ ಜೈಲಿಗಟ್ಟಬೇಕು. ಹಾಗಾದರೆ ಮಾತ್ರ ದೇಶದಲ್ಲಿ ಸಾಮರಸ್ಯ ಉಳಿಯಬಹುದು ಎಂದು ಹೇಳಿದ್ದಾರೆ.
ತಾಜ್ ಮಹಲ್ ಇರುವ ಜಾಗದಲ್ಲಿ ದೇವಾಲಯ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಕುರುಮಿ ಹೇಳಿದ್ದರು.